ದೇಶದ ಸ್ವಚ್ಚನಗರಗಳ ಪಟ್ಟಿ ಪ್ರಕಟ: ಅರಮನೆ ನಗರಿ ಮೈಸೂರಿಗೆ ಪ್ರಥಮ ಸ್ಥಾನ…

ಮೈಸೂರು,ಆ,20,2020(www.justkannada.in):  ಸ್ವಚ್ಚ ಸರ್ವೇಕ್ಷಣಾ ಅಭಿಯಾನದಡಿ ಸ್ವಚ್ಛ ನಗರಗಳ ಫಲಿತಾಂಶ ಪ್ರಕಟವಾಗಿದ್ದು  3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೊದಲ ಸ್ಥಾನ ಪಡೆದಿದೆ.jk-logo-justkannada-logo

3ರಿಂದ 10 ಲಕ್ಷ ಜನಸಂಖ್ಯೆಯುಳ್ಳ ಸ್ವಚ್ಚ ನಗರಗಳ ಪೈಕಿ ಮೈಸೂರಿಗೆ ಮೊದಲ ಸ್ಥಾನ ಲಭಿಸಿದೆ. ಇನ್ನು ಉತ್ತಮ ಸುಸ್ಥಿರ ನಗರಗಳ ಪೈಕಿ ಕರ್ನಾಟಕದ ಬೆಂಗಳೂರಿಗೆ ಮೊದಲ ರ್ಯಾಂಕ್ ಬಂದಿದೆ. ಈ ನಡುವೆ ಒಂದು ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಇಂದೋರ್ ಗೆ ಮೊದಲ ಸ್ಥಾನ ಲಭಿಸಿದ್ದು ಈ ಬಾರಿಯೂ  ನಂ1 ಪಟ್ಟ ಉಳಿಸಿಕೊಳ್ಳುವಲ್ಲಿ ಮಧ್ಯಪ್ರದೇಶದ ಇಂದೋರ್ ಯಶಸ್ವಿಯಾಗಿದೆ.

ಈ ಪಟ್ಟಿಯಲ್ಲಿ ಗುಜರಾತ್ ನ ಸೂರತ್ ಎರಡನೇ ಸ್ಥಾನ ಪಡೆದರೇ ಮಹಾರಾಷ್ಟ್ರದ ನವಿ ಮುಂಬೈ  ಮೂರನೇ ಸ್ಥಾನ ಬಾಚಿಕೊಂಡಿದೆ.list-clean-city-swach-sarvekshan-abhiyan-mysore-first

ಒಂದು ಲಕ್ಷ ಮೇಲ್ಪಟ್ಟ ಜನಸಂಖ್ಯೆ ನಗರಗಳ ಪೈಕಿ ಮುಂಬೈನ ಮೂರು ನಗರಗಳಿಗೆ ಸ್ಥಾನ ಸಿಕ್ಕಿದೆ. ಮಹಾರಾಷ್ಟ್ರದ ಕರಾಡ್ ಮೊದಲ ಸ್ಥಾನ ಪಡೆದಿದ್ದು, ಮಹಾರಾಷ್ಟ್ರದ ಸಾಸ್ವಾಡ್ ಗೆ ಎರಡನೇ ಸ್ಥಾನ ಹಾಗೂ ಮಹಾರಾಷ್ಟ್ರದ ಲೋನವಾಲ  ಮೂರನೇ ಸ್ಥಾನ ಲಭಿಸಿದೆ.

Key words: List -clean city- swach sarvekshan abhiyan- Mysore -first