“ಲಿಂಗಾಂಬುದಿ ಕೆರೆಗೆ ಮಳೆಯ ನೀರು ಸರಾಗವಾಗಿ ತಲುಪುವಂತೆ ಮಾಡಬೇಕು” : ಸಚಿವ ಸಿ.ಪಿ.ಯೋಗೇಶ್ವರ್ ಸೂಚನೆ 

ಮೈಸೂರು,ಮಾರ್ಚ್,13,2021(www.justkannada.in) : ಲಿಂಗಾಂಬುದಿ ಕೆರೆಗೆ ಮಳೆಯ ನೀರು ಹರಿದು ಬರುವ ಕಾಲುವೆಗಳು ಕಸಕಡ್ಡಿ ಹಾಗೂ ಪ್ಲಾಸ್ಟಿಕ್ ಸೇರಿದಂತೆ ಅನುಪಯುಕ್ತ ವಸ್ತುಗಳಿಂದ ತುಂಬಿಹೋಗಿದೆ. ಹೀಗಾಗಿ, ಕಾಲುವೆಗಳಲ್ಲಿ ತುಂಬಿರುವ ತ್ಯಾಜ್ಯ ತೆರವುಗೊಳಿಸಿ ಮಳೆಯ ನೀರು ಸರಾಗವಾಗಿ ಕೆರೆಗೆ ತಲುಪುವಂತೆ ಮಾಡಬೇಕು ಎಂದು ಪ್ರವಾಸೋದ್ಯಮ ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಸಚಿವ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.jk

ಸಚಿವರು ಲಿಂಗಾಂಬುದಿ ಕೆರೆ ವೀಕ್ಷಣೆ ಮಾಡಿ, ಈ ಸಂಬಂಧ ಸದ್ಯದಲ್ಲೇ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವರು ಇದೇ ವೇಳೆ ಹೇಳಿದರು.

 Lingambudhi Lake-Mysore-Minister-C.P.Yogeshwar-Observation 

ಬೆಳಿಗ್ಗೆ ವಾಕಿಂಗ್ ಬಂದಿದ್ದ ಮೈಸೂರಿನ ಜನಸಾಮಾನ್ಯರು ಕೆರೆಯ ಇತಿಹಾಸದ ಬಗ್ಗೆ ಸಚಿವರೊಂದಿಗೆ ಮೆಲುಕು ಹಾಕಿದರು. ಈ ಸಂದರ್ಭದಲ್ಲಿ ಸಚಿವರೊಡನೆ ಪರಿಸರ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇದ್ದರು.

key words :  Lingambudhi Lake-Mysore-Minister-C.P.Yogeshwar-Observation