ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್ ಆರ್ ಟಿಸಿ ಸಿಬ್ಬಂದಿಯಿಂದ ಪತ್ರ ಚಳುವಳಿ…

ಹಾಸನ,ಜೂ,22,2019(www.justkannada.in): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಹಾಸನದಲ್ಲಿ ಕೆ.ಎಸ್ ಆರ್ ಟಿಸಿ ಸಿಬ್ಬಂದಿ ಪತ್ರ ಚಳುವಳಿ ನಡೆಸಿದರು.

ನಮ್ಮನ್ನಾ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು  ರಾಜ್ಯದಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಯ ನಾಲ್ಕು ವಿಭಾಗಗಳ ಸಿಬ್ಬಂದಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಮೂಲಕ ಚಳುವಳಿ ಆರಂಭಿಸಿದ್ದಾರೆ.

ನಿನ್ನೆ  ಹಾಸನದಲ್ಲಿ ಘಟಕ 2ರ ಸಿಬ್ಬಂದಿ ಹಾಗೂ ನೌಕರ ವರ್ಗ ಪತ್ರಿ ಚಳುವಳಿಯನ್ನು ಆರಂಭಿಸಿದರು. ಇಂದು ಘಟಕ 1ರ ಸಿಬ್ಬಂದಿ ಮತ್ತು ಸಂಸ್ಥೆಯ ನೌಕರ ವರ್ಗದವರು ಹಾಗೂ ಹಿಂದೆ ಸಂಸ್ಥೆಯ ವಿರುದ್ದ ಪ್ರತಿಭಟನೆ ಮಾಡಿದರು ಎಂಬ ಕಾರಣಕ್ಕೆ ಅಮಾನತುಗೊಂಡಿದ್ದ ಚಾಲಕರು ಮತ್ತು ನಿರ್ವಾಹಕರು ಕೂಡ ಇವತ್ತು ಪ್ರತಿಭಟನೆಯಲ್ಲಿ ಭಾಗವಹಿಸಿ ಪತ್ರ ಚಳುವಳಿ ಮಾಡಿದ್ದು ವಿಶೇಷವಾಗಿತ್ತು.

ಪತ್ರ ಚಳುವಳಿ ಬಗ್ಗೆ ಮಾತನಾಡಿದ  ಚಾಲಕ-ಕಂ-ನಿರ್ವಾಹಕ ಪಾಲಾಕ್ಷ ಎಂಬುವವರು, ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಶೇಕಡಾ 30 ರಷ್ಟು ವೇತನ ತಾರತಮ್ಯ ಇದೆ.   ಹೀಗಾಗಿ ನಿವೃತ್ತಿ ನಂತರ ಪಿಂಚಣಿ ಸೌಲಭ್ಯ ಒದಗಿಸಿಕೊಡಬೇಕು. ಮತ್ತು ಇಲಾಖೆಯ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸಬೇಕು ಎಂಬ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಜಿಲ್ಲಾ ವ್ಯಾಪ್ತಿಯ ಪ್ರತಿ ವಿಭಾಗಿಯ ಘಟಕಗಳಲ್ಲಿ ಒಂದೊಂದು ದಿನ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರಿಗೆ ಹಾಗೂ ಸಾರಿಗೆ ಸಚಿವರಿಗೆ ಮತ್ತು ಪ್ರತಿಪಕ್ಷ ನಾಯಕರುಗಳಿಗೆ ಪತ್ರ ರವಾನೆ ಮಾಡುತ್ತಿದ್ದಾರೆ ಎಂದರು.

ಇನ್ನು ಯಾದಗಿರಿಯಲ್ಲಿ ಕೂಡ ನಿನ್ನೆ ಗ್ರಾಮವಾಸ್ತವ್ಯದ ವೇಳೆ ವಿಶೇಷ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಾಹನವನ್ನು ತಡೆದು ಅಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂರು ವಿಭಾಗಿಯ ಘಟಕಗಳ ಕಾರ್ಮಿಕರು, ನೌಕರರು, ಮತ್ತು ಸಿಬ್ಬಂದಿ ವರ್ಗದವರು ಪತ್ರವನ್ನು ನೀಡುವ ಮೂಲಕ ಕುಮಾರಸ್ವಾಮಿಯವರಿಗೆ ನೇರವಾಗಿ ಪತ್ರ ನೀಡುವ ಮೂಲಕ ಪತ್ರ ಚಳುವಳಿಯನ್ನು ಮಾಡಿದರು.

ಈ ನಡುವೆ ಹಾಸನ ವಿಭಾಗಿಯ ವ್ಯಾಪ್ತಿಯಲ್ಲಿ ಚನ್ನರಾಯಪಟ್ಟಣ ಹೊಳೆನರಸೀಪುರ ಅರಕಲಗೂಡು ರಾಮನಾಥಪುರ ಮತ್ತು ಹಾಸನ ನಗರದ ಎರಡು ಘಟಕಗಳು ಸೇರಿ ಒಟ್ಟು 6 ಘಟಕಗಳಲ್ಲಿ ಸುಮಾರು 2500ಕ್ಕೂ ಅಧಿಕ ಮಂದಿ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರೆಲ್ಲರನ್ನು ಕೂಡ ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

key words: Letter –movement- KSRTC- staff  -various demands.