ಕೆ.ಎಸ್ ಈಶ್ವರಪ್ಪ ಪತ್ರ ವಿಚಾರ: ಸಿಎಂ ಸಮರ್ಥಿಸಿಕೊಂಡ ಸಚಿವ ಎಸ್.ಟಿ.ಸೋಮಶೇಖರ್…

kannada t-shirts

ಮೈಸೂರು,ಏಪ್ರಿಲ್,5,2021(www.justkannada.in): ಪಕ್ಷದ ಹೈಕಮಾಂಡ್ ಗೆ ಸಿಎಂ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ  ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಸಚಿ ಎಸ್.ಟಿ ಸೋಮಶೇಖರ್ ಸಮರ್ಥಿಸಿಕೊಂಡಿದ್ದಾರೆ.Illegally,Sand,carrying,Truck,Seized,arrest,driver

ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಮಂತ್ರಿಗಳು ಶಾಸಕರಿಗೆ ಸ್ಪಂದಿಸದಿದ್ದರೆ ಸಿಎಂ ಮಧ್ಯಪ್ರವೇಶ ಮಾಡ್ತಾರೆ. ಅದು ಸಿಎಂ ಅವರ ಪರಮಾಧಿಕಾರ ಎಂದು ಮಾರ್ಮಿಕ ಉತ್ತರ ನೀಡಿದರು.

ಮಂತ್ರಿಗಳು ತಕ್ಷಣ ಸ್ಪಂದಿಸಿದ್ರೆ ಸಿಎಂಗೆ ಯಾರು ದೂರು ಕೊಡೋದಿಲ್ಲ. ಯಾರು ಸ್ಪಂದಿಸೋಲ್ಲ ಆಗ ದೂರು ಕೋಡೊದು ವಾಡಿಕೆ. ನಾನು ಸಹಕಾರಿ ಸಚಿವನಾಗಿದ್ದೇನೆ. ನಾನು ಸಹಕಾರಿಗಳಿಗೆ, ಶಾಸಕರಿಗೆ ಸ್ಪಂದಿಸೋದು ನನ್ನ ಕೆಲಸ. ನಾನು ಸ್ಪಂದಿಸದಿದ್ದರೆ ಸಿಎಂ ಮಧ್ಯ ಪ್ರವೇಶ ಮಾಡ್ತಾರೆ. ಈಶ್ಚರಪ್ಪ ಪ್ರಕರಣ ಅಂತಲ್ಲ ಎಲ್ಲ ಸಚಿವರ ವಿಷಯದಲ್ಲು ಇದೆ ಆಗೋದು. ಯಾವ ಮಂತ್ರಿಯೇ ಆಗಲಿ ಅವರ ಕೆಲಸ ಮಾಡಬೇಕು. ಅದಕ್ಕೆ ಅಲ್ವಾ ನಮ್ಮನ್ನ ಮಂತ್ರಿ ಮಾಡಿರೋದು. ಮಂತ್ರಿಗಳು ಸ್ಪಂದಿಸದಿದ್ದರೆ ಸಿಎಂ ಮಧ್ಯ ಪ್ರವೇಶ ಮಾಡೋದ್ರಲ್ಲಿ ತಪ್ಪೇನಿಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಸಾರ್ವಜನಿಕರು,ಶಾಸಕರು ಯಾವ ಇಲಾಖೆ ಮೇಲೆ ಹೆಚ್ಚು ದೂರು ಕೊಡ್ತಾರೆ ಆಗ ಸಿಎಂ ಮಧ್ಯಪ್ರವೇಶ ಮಾಡ್ತಾರೆ. ಈಶ್ವರಪ್ಪ ಪ್ರಕರಣದಲ್ಲಿ ಕೆಲವು ಶಾಸಕರು ದೂರು ನೀಡಿದ್ದಾರೆ. ನೀವು ಹಣ ಬಿಡುಗಡೆ ಮಾಡಿದರು ಆರ್‌ಡಿಪಿಆರ್ ಬಿಡುಗಡೆ ಮಾಡ್ತಿಲ್ಲ ಅಂತ ದೂರಿದ್ದಾರೆ. ಅದಕ್ಕೆ ಸಿಎಂ ಮಧ್ಯಪ್ರವೇಶ ಮಾಡಿದ್ದಾರೆ. ಇದರಲ್ಲಿ ತಪ್ಪೆನಿಲ್ಲ ಎಂದು ಸಿಎಂರನ್ನ ಸಚಿವ ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡರು. Letter - KS Eshwarappa-minister-ST Somashekhar-defended - CM.

ವಿಜಯೇಂದ್ರ ಒಂದು ದಿನವು ಮೈಸೂರಿನ ವಿಚಾರಕ್ಕೆ ಹಸ್ತಕ್ಷೇಪ ಮಾಡಿಲ್ಲ.

ಮೈಸೂರಿಗೆ ವಿಜಯೇಂದ್ರ ಬರ್ತಾರೆ ಅಂದ ಮೇಲೆ ಇವರ ನಾಡಿಮೀಡಿತ ಜಾಸ್ತಿ ಆಗಿದೆ. ಅದಕ್ಕಾಗಿ ಮೈಸೂರಿನ ಶಾಸಕರು ವಿಜಯೇಂದ್ರ ಮೇಲೆ ಆರೋಪ ಮಾಡ್ತಿದ್ದಾರೆ. ಶಾಸಕರು ಹೇಳಿಕೆ ಕೊಡುವ ಮುನ್ನ ಯೋಚನೆ ಮಾಡಲಿ. ಒಂದು ವರ್ಷದಿಂದ ನನ್ನ ಬಳಿ ಎಲ್ಲಾ ಕೆಲಸ ಮಾಡಿಸಿಕೊಂಡಿದ್ದಾರೆ. ಸಡನ್ ಆಗಿ ವಿಜಯೆಂದ್ರ ಹೆಸರು ಯಾಕೇ ತರಬೇಕು. ವಿಜಯೇಂದ್ರ ಸರ್ಕಾರ ಅಲ್ಲ. ಸರ್ಕಾರವಾಗಿ ನಾವಿದ್ದೀವಿ, ಸಿಎಂ ಇದ್ದಾರೆ. ವಿಜಯೇಂದ್ರ ಬಿಜೆಪಿ ಪಕ್ಷದ ಉಪಾಧ್ಯಕ್ಷ ಅಷ್ಟೇ. ಇಲ್ಲಿಯವರೆಗು ಒಂದು ದಿನವು ಅವರು ಮೈಸೂರಿನ ವಿಚಾರಕ್ಕೆ ಹಸ್ತಕ್ಷೇಪ ಮಾಡಿಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಸಿಎಂ 45 ವರ್ಷದ ಅನುಭವ ಹೊಂದಿದ್ದಾರೆ. ಪ್ರೆಸ್‌ಮೀಟ್ ಮಾಡಿದ ಶಾಸಕರು ಏನು ನೋಡಿಲ್ಲ. ಅವರನ್ನ ಕುಟುಂಬದ ರಬ್ಬರ್ ಸ್ಟಾಂಪ್ ಅಂದುಕೊಂಡರೆ ಅವರಂತ ಶತದಡ್ಡ ಇನ್ನೋಬ್ಬರಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್  ಟೀಕಿಸಿದರು.

ಮೈಸೂರು ಮೈಮುಲ್‌ನಲ್ಲಿ ಅಕ್ರಮ ಆರೋಪ ಪ್ರಕರಣ: ಸಾ.ರಾ.ಮಹೇಶ್ ಗೆ ತಿರುಗೇಟು…

ಮೈಸೂರು ಮೈಮುಲ್‌ನಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಾ.ರಾ ಮಹೇಶ್ ಗೆ ತಿರುಗೇಟು ನೀಡಿದ ಸಚಿವ ಎಸ್.ಟಿ ಸೋಮಶೇಖರ್,  ಪ್ರಕರಣ ಸಂಬಂಧ ಕೆದಕಿ ಕೆದಕಿ ಏನ್ ಮಾಡಿದ್ರು ? 250 ಜನರಿಗೆ ಕೆಲಸ ಕೊಡದನ್ನ ಎಷ್ಟು ತಡ ಮಾಡಿದ್ರು. ಇದರಿಂದ ಕೊನೆಗೆ ಏನಾಯ್ತು ಹೇಳಿ..? ಎಂದು ಪ್ರಶ್ನಿಸಿದರು.

ಹಾದಿಬಿದಿಯಲ್ಲಿ ಕೇಳುವವರಿಗೆ ನಾನು ಉತ್ತರ ಕೊಡೋಲ್ಲ. ನಾನು ಉತ್ತರ ಕೊಡಬೇಕಾದ್ರೆ ನಾನು ಅವರು ಕ್ಯಾಬಿನೆಟ್ ಸಚಿವನಾಗಿರಬೇಕು. ಇಲ್ಲವಾದಲ್ಲಿ ನಾನು ಮಾತನಾಡೋಲ್ಲ. ಸಹಕಾರಿ ಸಚಿವರ ಹೇಳಿಕೆ ಅಡಿಯಲ್ಲಿ ಸರ್ಕಾರ ನಡೆಯುತ್ತಾ?. ಕೋರ್ಟ್ ಹೇಳಿದಂತೆ ನಡೆಯೋದು ತಾನೆ. ಇದಕ್ಕೆಲ್ಲ ಉತ್ತರ ಕೊಡೋಕೆ ಆಗೋಲ್ಲ ಎಂದರು.

ENGLISH SUMMARY….

K.S. Eshwarappa letter issue: Minister S.T. Somashekar defends CM
Mysuru, Apr. 5, 2021 (www.justkannada.in): Minister S.T. Somashekar has defended Chief Minister B.S. Yedyurappa over the issue of the letter written to the high command by Minister K.S. Eshwarappa.
Speaking to the presspersons in Mysuru today Minister S.T. Somashekar said if ministers won’t respond properly to the MLAs, Chief Minister will intervene. It is a CMs supreme power.
“If ministers respond immediately nobody will complain to the CM. They will complain to the CM when the ministers won’t respond immediately. I am the Minister for Cooperation. It is my duty to respond to my sub-ordinates and MLAs. The CM will intervene if I won’t respond properly. It is not only Eswharappa’s case, it happens in all such Ministers’ cases. Whichever Minister it may be, they should work. Is it not their duty. That is why they have been made a Minister. If they won’t respond the CM will have to intervene, I don’t see any fault in it,” he said.
Further on the occasion he also clarified that the accusations on Chief Minister’s son Vijendra is false. Vijendra is just the Vice-President of BJP. He has never intervened in any of the issues concerned to Mysuru.
Keywords: Minister S.T. Somashekar/ defends CM/ Minister K.S. Eshwarappa

Key words: Letter – KS Eshwarappa-minister-ST Somashekhar-defended – CM.

website developers in mysore