ರಾಜ್ಯದ 13,800 ಸರ್ಕಾರಿ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಸಂಖ್ಯೆ ವಿದ್ಯಾರ್ಥಿಗಳು.

ಬೆಂಗಳೂರು, ಜುಲೈ 20, 2022 (www.justkannada.in): ರಾಜ್ಯದ ಸುಮಾರು 13,800  ಸರ್ಕಾರಿ ಶಾಲೆಗಳಲ್ಲಿ ಕೇವಲ 25 ವಿದ್ಯಾರ್ಥಿಗಳಿರುವ ಕಾರಣದಿಂದಾಗಿ ಮುಚ್ಚುವ ಹಂತದಲ್ಲಿವೆ.

ಈ ಎಲ್ಲಾ ಶಾಲೆಗಳೂ ಸಹ ಗ್ರಾಮೀಣ ಪ್ರದೇಶಗಳಲ್ಲಿದ್ದು, ಈ ಪೈಕಿ ೧,೮೦೦ ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎನ್ನುತ್ತಿದೆಯಾದರೂ, ಪ್ರತಿ ಹೋಬಳಿಯಲ್ಲಿಯೂ ಒಂದು ಶಾಲೆಯನ್ನು ‘ಮಾದರಿ ಶಾಲೆ’ಯನ್ನಾಗಿ ಉನ್ನತೀಕರಿಸುವ ಇಲಾಖೆಯ ಯೋಜನೆ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ.

ತಜ್ಞರ ಪ್ರಕಾರ ಇಲಾಖೆಯು ಶಾಲೆಗಳನ್ನು ವಿಲೀನಗೊಳಿಸುವ ಹೆಸರಿನಲ್ಲಿ ಕಡಿಮೆ ಪ್ರವೇಶಾತಿ ಇರುವ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಮಾದರಿ ಶಾಲೆಗಳಿಗೆ ಸ್ಥಳಾಂತರಿಸಲಿದೆಯಂತೆ. “ವಿಲೀನಗೊಳಿಸುವಿಕೆ ಕೇವಲ ಒಂದು ಪದವಷ್ಟೇ. ತಾಂತ್ರಿಕವಾಗಿ, ಈ ಶಾಲೆಗಳನ್ನು ಮುಚ್ಚಿ, ವಿದ್ಯಾರ್ಥಿಗಳನ್ನು ಹತ್ತಿರದ ಇತರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತದೆ,” ಎನ್ನುವುದು ಶಿಕ್ಷಣ ತಜ್ಞರೊಬ್ಬರ ಅಭಿಪ್ರಾಯವಾಗಿದೆ.

ಆದಾಗ್ಯೂ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಅವರು,  ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವ ಯೋಚನೆ ಸರ್ಕಾರಕ್ಕೆ ಇಲ್ಲ. “ಯಾವುದೇ ಶಾಲೆಯನ್ನೂ ಸಹ ಮುಚ್ಚುವ ಪ್ರಸ್ತಾಪವಿಲ್ಲ. ಬದಲಿಗೆ, ನಾವು ಕೇವಲ 10ಕ್ಕಿಂತ ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿರುವ ಶಾಲೆಗಳನ್ನೂ ಸಹ ನಡೆಸಿಕೊಂಡು ಹೋಗುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.

“ಕೇವಲ ಒಂದು ಸಂಖ್ಯೆಯ ವಿದ್ಯಾರ್ಥಿಗಳಿರುವಂತಹ ಸರ್ಕಾರಿ ಶಾಲೆಗಳೂ ಇವೆ, ಆದರೆ ನಾವು ಅದನ್ನು ಮುಚ್ಚಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಪ್ರವೇಶಾತಿಗಳ ಪ್ರಮಾಣ ಕಡಿಮೆಯಾಗುತ್ತಿದೆ. ಕೇವಲ ಶಾಲೆಗಳಷ್ಟೇ ಅಲ್ಲ, ಬದಲಿಗೆ ಅಂಗನವಾಡಿಗಳ ಪರಿಸ್ಥಿತಿಯೂ ಹೀಗೆ ಇವೆ,” ಎಂದರು.

ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಪ್ರಶ್ನೆಗಳಿಂದಾಗಿಯೇ ಪ್ರವೇಶಾತಿಗಳ ಪ್ರಮಾಣ ಕುಸಿಯುತ್ತಿದೆ ಎಂಬ ವಾಸ್ತವಾಂಶವನ್ನು ಸಚಿವ ಬಿಸಿ ನಾಗೇಶ್ ಒಪ್ಪಿಕೊಂಡಿದ್ದಾರೆ. “ಪೋಷಕರಲ್ಲಿ ಶಿಕ್ಷಣದ ಗುಣಮಟ್ಟದ ನಿರೀಕ್ಷೆ ಬಹಳ ಹೆಚ್ಚಾಗಿದೆ. ಗುಣಮಟ್ಟದ ಕಾಳಜಿಗಳಿಂದಾಗಿಯೇ ಪ್ರವೇಶಾತಿಯ ಪ್ರಮಾಣ ಕುಸಿಯುತ್ತಿದೆ,” ಎಂದು ಸಚಿವರು ತಿಳಿಸಿದರು.

ಶಿಕ್ಷಕರೇ ಇಲ್ಲದಿರುವಂತಹ ಶಾಲೆಗಳೂ ಸಹ ಇವೆ. “ನಮ್ಮಲ್ಲಿ ಒಂದು ಅಂಕಿ ವಿದ್ಯಾರ್ಥಿಗಳಿರುವ ಹಾಗೂ ಶಿಕ್ಷಕರೇ ಇಲ್ಲದಿರುವಂತಹ ಶಾಲೆಗಳೂ ಸಹ ಇವೆ. ಚಾಮರಾಜನಗರದಲ್ಲಿ ಇಂತಹ ೧೬ ಹಾಗೂ ರಾಯಚೂರಿನಲ್ಲಿ ಸುಮಾರು ೩೦ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ,” ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Less than -25 students – 13,800- government schools- minister-BC Nagesh