ಚಾಮುಂಡಿ ಬೆಟ್ಟದ ಬಳಿ ರಸ್ತೆ ದಾಟುತ್ತಿದ್ದ  ಚಿರತೆಗೆ ಅಪರಿಚಿತ ವಾಹನ ಡಿಕ್ಕಿ….

kannada t-shirts

ಮೈಸೂರು,ಡಿಸೆಂಬರ್,28,2020(www.justkannada.in):  ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿಯಾದ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ.

ಮಧ್ಯರಾತ್ರಿ ವೇಳೆ ದೇವಿಕೆರೆ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. ದೇವಿಕೆರೆ ಕ್ರಾಸ್ ಬಳಿ ಚಿರತೆ ರಸ್ತದಾಟುತ್ತಿದ್ದ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಿರತೆಯ ಸೊಂಟ ಮುರಿದಿದ್ದು ಚಿರತೆ ಗಂಭೀರ ಗಾಯಗೊಂಡಿದೆ.Leopard - road –accident-near- mysore- Chamundi hills

ಮೇಲೇಳಲಾಗದೆ ಚಿರತೆ ನರಳುತ್ತಿದ್ದು, ಸ್ಥಳದಲ್ಲಿ ಜನ‌ ಜಮಾಯಿಸಿದ್ದರಿಂದ ಚಿರತೆ ಬೆದರಿ ತೆವಳುತ್ತಾ ಪೊದೆ ಸೇರಿಕೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಚಿರತೆ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

Key words: Leopard – road –accident-near- mysore- Chamundi hills

website developers in mysore