ಇಬ್ಬರು ಬಾಲಕರ ಮೇಲೆ ಚಿರತೆ ದಾಳಿ: ಅಂಬ್ಯುಲೆನ್ಸ್ ಇದ್ದರೂ ಇಲ್ಲ ಎಂದ  ಸಿಬ್ಬಂದಿ ವಿರುದ್ಧ ಆಕ್ರೋಶ.

ತುಮಕೂರು,ಡಿಸೆಂಬರ್,10,2022(www.justkannada.in):  ಇಬ್ಬರು ಬಾಲಕರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ಕೊರಟಗೆರೆ ತಾಲ್ಲೂಕಿನ ಕೊಳ್ಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯಲ್ಲಿ  ಈ ಘಟನೆ ನಡೆದಿದೆ. ಧನುಷ್ (13)  ಹಾಗೂ ಚೇತನ್ ಕೆ (15) ಮೇಲೆ ಚಿರತೆ ದಾಳಿ  ನಡೆಸಿದೆ.

ಇಬ್ಬರು ದನದ ಕೊಟ್ಟಿಗೆಗೆ ಹಾಲು ಕರೆಯಲು ಹೋಗುವಾಗ  ಚಿರತೆ ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ಮಕ್ಕಳ ಕಿರೀಚಾಟ ನೋಡಿ ಚಿರತೆ ಓಡಿ ಹೋಗಿದೆ. ಅವರ ತಂದೆ ಕೆಂಪರಾಜು ಅವರು 108 ಆಂಬ್ಯುಲೆನ್ಸ್ ಗೆ ಫೋನ್ ಮಾಡಿದರೂ ಸಹ ನಮ್ಮಲ್ಲಿ ಅಂಬುಲೆನ್ಸ್ ಇಲ್ಲ ತುಮಕೂರಿಗೆ ಕರೆ ಮಾಡಿ ಎಂದು ಅಧಿಕಾರಿಗಳು ನಿರ್ಲಕ್ಷ್ಯದ ಉತ್ತರ ನೀಡಿದರು ಎಂಬ ಆರೋಪ ಕೇಳಿ ಬಂದಿದೆ.

ಗಾಯಾಳು ಇಬ್ಬರು ಬಾಲಕರನ್ನ ಖಾಸಗಿ ಕಾರಿನಲ್ಲಿ ಚಿಕಿತ್ಸೆಗೋಸ್ಕರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕೊರಟಗೆರೆ ಕರೆದೊಯ್ಯುವಾಗ ಅಲ್ಲಿ ನಿಂತಿರುವ ಎರಡು ಅಂಬುಲೆನ್ಸ್ ನೋಡಿ   ಕೆಂಪರಾಜು ಅಧಿಕಾರಿಗಳ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Leopard- attack – two- boys: