ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದ ಘಟನೆ: ಮುಂದೆ ಇಂತಹ ಘಟನೆಗಳು ಆಗಬಾರದು- ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ…

ಬೆಂಗಳೂರು,ಜನವರಿ 4,2021(www.justkannada.in):  ವಿಧಾನ ಪರಿಷತ್ ನಲ್ಲಿ ಇತ್ತೀಚೆಗೆ ನಡೆದ ಗಲಾಟೆ ಬಗ್ಗೆ  ವಿಷಾದ ವ್ಯಕ್ತಪಡಿಸಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದ ಘಟನೆಯಾಗಿದೆ.  ಮುಂದೆ ಇಂತಹ ಘಟನೆಗಳು ಆಗಬಾರದು. ಅದಕ್ಕಾಗಿ ಸಮಾಲೋಚನೆ ಸಭೆ ನಡೆಸಬೇಕಾಗಿದೆ ಎಂದು ಹೇಳಿದರು.jk-logo-justkannada-mysore

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಯಾರ್ಯಾರ ಪಾತ್ರ ಏನೇನಿತ್ತು ಗೊತ್ತಿಲ್ಲ. ಅಲ್ಲಿ ಹೀಗಾಗಿದೆ, ಮುಂದೆ ವಿಧಾನಸಭೆಯಲ್ಲೂ ಆಗಬಹುದು. ಅದಕ್ಕೆ ಈಗಲೇ ಇದರ ಬಗ್ಗೆ ಗಮನಹರಿಸಬೇಕಿದೆ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿ ಹಿಡಿಯಬೇಕಿದೆ. ಘಟನೆಗೆ ಯಾರ್ಯಾರ ಪಾಲು ಎಷ್ಟಿದೆ ಗೊತ್ತಿಲ್ಲ. ಮುಂದೆ ಇಂತಹ ಘಟನೆಗಳು ಆಗಬಾರದು. ಅದಕ್ಕಾಗಿ ಈ ಸಮಾಲೋಚನಾ ಸಭೆ ನಡೆಸಬೇಕಿದೆ ಎಂದರು

ವಿಧಾನಸಭೆಗೆ ತನ್ನದೇ ಆದ ಇತಿಹಾಸವಿದೆ. ೧೦೦೭ ರಲ್ಲೇ ಪರಿಷತ್ ಸ್ಥಾಪಿಸಲಾಗಿತ್ತು. ಮೈಸೂರು ಅರಸರು ಅದಕ್ಕೆ ಭದ್ರ ಬುನಾದಿ ಹಾಕಿದ್ದರು. ಸ್ವಾತಂತ್ರ್ಯ ನಂತರವೂ ಅದು ಹಾಗೇ ಉಳಿದು ಬಂದಿದೆ. ಆದರೆ ಮೊನ್ನೆಯ ಮೇಲ್ಮನೆ ಘಟನೆ ತುಂಬ ಬೇಸರ ತಂದಿದೆ. ಸಂಸದೀಯ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದೆ. ಇದರ ಬಗ್ಗೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಸಭಾಪತಿ ಬರಲು ತಡೆದಿದ್ದು,ಉಪಸಭಾಪತಿ ಬಂದು ಕುಳಿತಿದ್ದು. ಉಪಸಭಾಪತಿಯವರನ್ನ ಕೆಳಗೆ ಎಳೆದದ್ದು. ಇನ್ನೊಬ್ಬರು ಬಂದು ಪೀಠದ ಮೇಲೆ ಕುಳಿತಿದ್ದು. ಇದೆಲ್ಲವನ್ನೂ ನಾಡಿನ ಜನ ನೋಡಿದ್ದಾರೆ. ಇದು ದೇಶದಲ್ಲಿ ನಮ್ಮನ್ನ ತಲೆತಗ್ಗಿಸುವಂತೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದ ಘಟನೆಯಾಗಿದೆ. ಈ ಘಟನೆಗೆ ಹಲವು ಹಿರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಸ್ಪೀಕರ್ ಕೂಡ ವ್ಯಕ್ತಪಡಿಸಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

legislative-council-roit-threatens-democracy-speaker-vishweshwar-hegde-kageri
ಕೃಪೆ- internet

ನಾವು ವಿಶ್ವಾಸ ಪೂರ್ಣವಾಗಿ ಮೌಲ್ಯಗಳನ್ನ ಬೆಳೆಸಬೇಕು. ಮೌಲ್ಯಗಳು ಕುಸಿಯದಂತೆ ನೋಡಿಕೊಳ್ಳಬೇಕಿದೆ. ಆತ್ಮಾವಲೋಕನದ ಅವಶ್ಯಕತೆ ನಮಗಿದೆ. ಆತ್ಮಾವಲೋಕನ ಮಾಡಿಕೊಳ್ಳಲು ಸೂಕ್ತ ಸಂದರ್ಭ ಬಂದಿದೆ. ಪರಿಷತ್ ಬೇಕೋ ಬೇಡ್ವೋ ಎಂಬ ಚರ್ಚೆ ನಡೆದಿವೆ. ಪರಿಷತ್ ಉತ್ತಮವಾಗಿ ಕೆಲಸ ಮಾಡಬೇಕು. ಜನ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ಹಾಗಾಗಿ ಆತ್ಮಾವಲೋಕನ ಸಭೆ ನಡೆಯಬೇಕು. ಸಂಸದೀಯ ಅನುಭವಿಗಳ ಜೊತೆ ಚರ್ಚಿಸುತ್ತೇನೆ. ನ್ಯಾಯಾಂಗ,ಕಾರ್ಯಾಂಗದವರು ಅನೇಕರಿದ್ದಾರೆ. ಮಾಧ್ಯಮ ಕ್ಷೇತ್ರದ ಅನೇಕರು ಇದ್ದಾರೆ. ಇವರೆಲ್ಲರ ಜೊತೆ ಸಮಾಲೋಚನ ಸಭೆ ನಡೆಸುತ್ತೇನೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಧರ್ಮೇಗೌಡರ  ನಿಧನಕ್ಕೆ ಶ್ರದ್ಧಾಂಜಲಿ

ಇನ್ನು ಉಪಸಭಾಪತಿ ಧರ್ಮೇಗೌಡರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಗ್ರಾಮಪಂಚಾಯ್ತಿಯಿಂದ ಮೇಲೆ ಬಂದವರು. ಅವರ ಅನಿರೀಕ್ಷಿತ ಸಾವು ಆಘಾತ ತಂದಿದೆ. ನಮ್ಮೆಲ್ಲರಿಗೂ ದುಃಖ ಭರಿಸುವ ಶಕ್ತಿ ಪರಮಾತ್ಮ ನೀಡಲಿ. ಅವರು ಉಪಸಭಾಪತಿಯಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದರು. ಅವರ ನಿಧನ ಸಾಕಷ್ಟು ನೋವು ತಂದಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.

Key words: legislative council-roit- threatens –democracy-Speaker -Vishweshwar Hegde Kageri