ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ…

kannada t-shirts

ಬೆಂಗಳೂರು,ಜೂ,17,2020(www.justkannada.in):  ಜೂನ್ 29ರಂದು ವಿಧಾನಪರಿಷತ್​ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಿಂದ ಇಬ್ಬರು ಅಭ್ಯರ್ಥಿಗಳ ಹೆಸರನ್ನ ಎಐಸಿಸಿ ಘೋಷಣೆ ಮಾಡಿದೆ.

ವಿಧಾನಪರಿಷತ್ ಚುನಾವಣೆಗೆ ಬಿ.ಕೆ. ಹರಿಪ್ರಸಾದ್ ಹಾಗೂ ನಸೀರ್ ಅಹ್ಮದ್  ಅವರನ್ನ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಾಂಗ್ರೆಸ್ ಹೈಕಮಾಂಡ್  ಘೋಷಣೆ ಮಾಡಿದೆ. ಜೂನ್​ 29ರಂದು ಕರ್ನಾಟಕ ವಿಧಾನಪರಿಷತ್​ ಚುನಾವಣೆ ನಡೆಯಲಿದೆ. 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್​​  ಇಬ್ಬರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಜೂನ್ 29 ರಂದು ನಡೆಯುವ ಪರಿಷತ್ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಸಲು ಕಡೆಯ ದಿನಾಂಕವಾಗಿದೆ.

 

Key words: legislative council- election-Congress- releases -list – candidates

website developers in mysore