ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾನೂನಾತ್ಮಕ ಕ್ರಮ ಆಗಬೇಕು -ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್  ಆಗ್ರಹ.

ಮೈಸೂರು,ಸೆಪ್ಟಂಬರ್,13,2021(www.justkannada.in): ಹುಚ್ಚಗಣಿ ದೇವಸ್ಥಾನ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪ್ರತಿಕ್ರಿಯೆ ನೀಡಿದ್ದು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಹುಚ್ಚಗಣಿ ದೇವಸ್ಥಾನ ನೆಲಸಮ ವಿಚಾರದಲ್ಲಿ ಬಿಜೆಪಿ ಅವರ ಕೈವಾಡ ಇದೆ. ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು ಬಿಜೆಪಿಯವರೆ ಆಗಿದ್ದಾರೆ. ಜಿಲ್ಲಾಡಳಿತ ಕೂಡ ನಿಮ್ಮ‌ ಕೈಯಲ್ಲೆ ಇದೆ. ಅವರ ಕಣ್ಣು ತಪ್ಪಿಸಿ ಹೊಡೆಯಲು ಹೇಗೆ ಸಾಧ್ಯ..? ಎಂದು ಪ್ರಶ್ನಿಸಿದರು.

ಜಿಲ್ಲಾಡಳಿತ 93 ಧಾರ್ಮಿಕ ಸ್ಥಳಗಳನ್ನು ಗುರುತಿಸಿದೆ. ಪ್ರತಾಪ್ ಸಿಂಹ ಕೋಮುವಾದ ಬಿತ್ತನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಜೊತೆ ಮಾತಾಡಿದ್ದಿನಿ ಇದನ್ನ ರಿವ್ಯೂವ್ ಮಾಡುವುದಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಹೇಗೆ ನಿಮ್ಮ ಸರ್ಕಾರ ಮಾಡಲು ಸಾಧ್ಯ. ಮುಸ್ಲಿ ಹಣ್ಣುಮಕ್ಕಳ ಬಗ್ಗೆ ನೀವು ಕೇವಲವಾಗಿ ಮಾತನಾಡಿದ್ದೀರಿ. ಕೂಡಲೇ ಪೊಲೀಸರು ಅವರನ್ನು ಅರೆಸ್ಟ್ ಮಾಡಬೇಕು. ಪ್ರತಾಪ್ ಸಿಂಹ ವಿರುದ್ಧ ಕಾನೂನಾತ್ಮಕ ಕ್ರಮ ಆಗಬೇಕು ಎಂದು ಎಂ.ಲಕ್ಷ್ಮಣ್  ಆಗ್ರಹಿಸಿದರು.

Key words: Legal action -against –MP- Pratap simha-KPCC -spokesperson -M. Laxman