ಮೈಸೂರು ನಗರದಲ್ಲಿ ಎಲ್ಇಡಿ ಬಲ್ಬ್ ಗಳ ಅಳವಡಿಕೆಗೆ ನಿರ್ಧಾರ: ಸಿಎಂ ಮತ್ತು ನಗರಾಭಿವೃದ್ಧಿ ಸಚಿವರಿಗೆ ಸಚಿವ ಎಸ್.ಟಿ ಸೋಮಶೇಖರ್ ಅಭಿನಂದನೆ…

ಮೈಸೂರು,ಸೆಪ್ಟಂಬರ್,15,2020(www.justkannada.in):  ಮೈಸೂರು ನಗರದಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಿಸಿ ಇಂಧನ ಕ್ಷಮತೆಯುಳ್ಳ ಎಲ್ಇಡಿ ಬಲ್ಬ್ ಗಳನ್ನು ಅಳವಡಿಸುವ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಹಾಗೂ ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.jk-logo-justkannada-logo

ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವುದರಿಂದ ಸರ್ಕಾರಕ್ಕೆ ಸಹ ಹೊರೆ ಕಡಿಮೆಯಾಗುತ್ತದೆ. ಇವು ಇಂಧನ ಕ್ಷಮತೆಯನ್ನು ಹೊಂದಿರುವುದರಿಂದ ಸಾಕಷ್ಟು ಇಂಧನದ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಹಣವೂ ಉಳಿತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಒಟ್ಟು 109.91 ಕೋಟಿ ರೂಪಾಯಿ ಮೊತ್ತದ ಎಲ್ಇಡಿ ಬೀದಿ ದೀಪ ಅಳವಡಿಸುವ ಯೋಜನೆಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಈಗಿನ ಅಂದಾಜಿನ ಪ್ರಕಾರ ಮೈಸೂರು ಮಹಾನಗರಪಾಲಿಕೆಗೆ 7 ವರ್ಷಗಳ ಅವಧಿಯಲ್ಲಿ ರಿಯಾಯಿತಿ ಅವಧಿಯಲ್ಲಿ 62.35 ಕೋಟಿ ರೂ. ನಿವ್ವಳ ಉಳಿತಾಯವಾಗಲಿದೆ. ಇದೊಂದು ಉತ್ತಮ ಯೋಜನೆಯಾಗಿದ್ದು, ವಿದ್ಯುತ್ ಸಮಕ್ಷ ಬಳಕೆ, ಸುಧಾರಿತ ಸೇವೆಗಳು, ಹಸಿರು ಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಕಡಿತ ಸಾಧ್ಯವಾಗಲಿದೆ.LED bulbs –Mysore-Minister- ST Somashekhar- congratulates - CM - Urban Development -Minister.

ಎಲ್ಲ ಸ್ಮಾರ್ಟ್ ಸಿಟಿಗಳ ಬೀದಿದೀಪಗಳು ಎಲ್ಇಡಿ ಆಗಿರಬೇಕು ಎಂಬ ಆದೇಶವಿದ್ದರೂ ಮೈಸೂರಿನಲ್ಲಿ ಇದುವರೆಗೆ ಕೈಗೂಡಿರಲಿಲ್ಲ. ಈ ಬಗ್ಗೆ ನಾನು ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡಾಗ ನನ್ನ ಗಮನಕ್ಕೆ ತರಲಾಗಿದ್ದ ಹಿನ್ನೆಲೆಯಲ್ಲಿ ಖುದ್ದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವರ ಬಳಿ ವಿಷಯ ಪ್ರಸ್ತಾಪಿಸಿ, ಈಗ ಒಪ್ಪಿಗೆ ಪಡೆಯಲಾಗಿದೆ. ಇವರ ಸಹಕಾರಕ್ಕೆ ನಾನು ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್ ನುಡಿದಿದ್ದಾರೆ.

Key words: LED bulbs –Mysore-Minister- ST Somashekhar- congratulates – CM – Urban Development -Minister.