ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಕೈ ಬಿಡಿ – ಸಾರಿಗೆ ನೌಕರರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ….

kannada t-shirts

ಹುಮನಾಬಾದ್,ಏಪ್ರಿಲ್,7,2021(www.justkannada.in):  ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮಾನವೀಯ ಆಧಾರದ ಮೇಲೆ ಮುಷ್ಕರವನ್ನು ಹಿಂದಕ್ಕೆ ಪಡೆಯುವಂತೆ ಗೃಹ,  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಸಾರಿಗೆ ನೌಕರರಿಗೆ ಮನವಿ ಮಾಡಿದರು.Illegally,Sand,carrying,Truck,Seized,arrest,driver

ಹುಮ್ನಾಬಾದಿನಲ್ಲಿ  ಮಾಧ್ಯಮಗಳ ಜತೆ ಮಾತನಾಡಿದ  ಗೃಹ ಸಚಿವ ಬಸವರಾಜ ಬೊಮ್ಮಾಯಿ,  ಸಾರಿಗೆ ನೌಕರರು ನಮ್ಮವರು. ನಮ್ಮ  ಸಹೋದರರಿದ್ದಂತೆ. ಸಾರಿಗೆ ನೌಕರರಿಗೆ ಹಿಂದೆಯೂ  ತಿಳುವಳಿಕೆಯನ್ನು ಮಾಡಿಕೊಟ್ಟಿದ್ದೇವೆ.  ಈಗಲೂ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಬಳ ಕಡಿತ ಮಾಡಿಲ್ಲ. ಬೇರೆ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಬಳವನ್ನು ಕಡಿತಗೊಳಿಸಲಾಗಿದೆ.  ಸಾರಿಗೆ ನೌಕರರ ಸಂಬಳ ಹೆಚ್ಚು ಮಾಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಅವರು ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ.  ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಸಾರಿಗೆ ನೌಕರರು ಹಾಗೂ ಸಾರಿಗೆ ನೌಕರರ ಸಂಘಟನೆಗಳ ಮುಖಂಡರೊಂದಿಗೆ ಮಾತನಾಡುತ್ತಾರೆ.  ಸಂಬಳ ಹೆಚ್ಚಳ ಮಾಡುವುದರ ಕುರಿತು ತೀರ್ಮಾನ ಮಾಡುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.Leave - strike - to transport workers –public-Home Minister- Basavaraj Bommai- appeals

ರಾಜ್ಯದಲ್ಲಿ ಪ್ರತಿದಿನ ಒಂದು ಕೋಟಿ ಜನ ಸಂಚಾರ ಮಾಡುತ್ತಾರೆ.  ವ್ಯಾಪಾರಕ್ಕೆ, ಕಾಲೇಜಿಗೆ, ಆಸ್ಪತ್ರೆಗೆ, ನೌಕರಿಗಾಗಿ ಹೋಗುವ ಜನರು ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಈಗ ಅವರಿಗೆ ತೊಂದರೆಯಾಗಿದೆ. ಈ ಮುಷ್ಕರವನ್ನು ಮಾನವೀಯ ಆಧಾರದ ಮೇಲೆ ಹಿಂದಕ್ಕೆ ಪಡೆದು ಸರ್ಕಾರದೊಂದಿಗೆ ಸಹಕರಿಸಬೇಕೆಂದು ಸಾರಿಗೆ ನೌಕರರು ಹಾಗೂ ಯೂನಿಯನ್ ಲೀಡರ್ ಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

Key words: Leave – strike -transport workers –public-Home Minister- Basavaraj Bommai- appeals

website developers in mysore