ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದ ಮೊಹಮ್ಮದ್ ಶಮಿ

Promotion

ಬೆಂಗಳೂರು ಡಿಸೆಂಬರ್ 23, 2019 (www.justkannada.in): ಮೊಹಮ್ಮದ್ ಶಮಿ ಕೂಡ ವರ್ಷವೊಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಅನ್ನೋ ದಾಖಲೆಯನ್ನ ಬರೆದಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಶೇಯ್ ಹೋಪ್​ರನ್ನ ಬೌಲ್ಡ್ ಮಾಡುವ ಮೂಲಕ ಒಟ್ಟು 42 ವಿಕೆಟ್ ಕಬಳಿಸಿ ಈ ದಾಖಲೆ ಬರೆದ್ರು. ಅಲ್ಲದೆ ತಮ್ಮ ಕರಿಯರ್​ನಲ್ಲಿ ಎರಡು ಬಾರಿ ಈ ದಾಖಲೆ ಬರೆದ ಮೊದಲ ಬೌಲರ್ ಕೂಡ ಶಮಿ.

ಈ ವರ್ಷ 21 ಪಂದ್ಯಗಳಲ್ಲಿ 42 ವಿಕೆಟ್​ಗಳನ್ನ ಶಮಿ ಪಡೆದಿದ್ದಾರೆ. ಇದರಲ್ಲಿ ಎರಡು ಬಾರಿ 4 ವಿಕೆಟ್​ಗಳ ಗೊಂಚಲು ಹಾಗೂ ಒಮ್ಮೆ 5 ವಿಕೆಟ್ ಪಡೆದ ಸಾಧನೆಯನ್ನ ಮಾಡಿದ್ದಾರೆ. ಇನ್ನು, ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಶಮಿ ಹ್ಯಾಟ್ರಿಕ್ ಕೂಡ ಪಡೆದು ಸಂಭ್ರಮಿಸಿದ್ರು.