“ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಕ್ರಮಕ್ಕೆ” : ವಕೀಲ ಡಾ.ಸಿ.ಎಸ್.ದ್ವಾರಕನಾಥ್ ಒತ್ತಾಯ

Promotion

ಮೈಸೂರು,ಫೆಬ್ರವರಿ,05,2021(www.justkannada.in) : ವಕೀಲ ವೃತ್ತಿಯ ಘನತೆಗೆ ಧಕ್ಕೆಯುಂಟು ಮಾಡಿದ ಮೀರಾ ರಾಘವೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ವಕೀಲ ಡಾ.ಸಿ.ಎಸ್.ದ್ವಾರಕನಾಥ್ ಒತ್ತಾಯಿಸಿದ್ದಾರೆ.jk

ಈ ಸಂಬಂಧ ಕರ್ನಾಟಕ ಬಾರ್ ಕೌನ್ಸಿಲ್ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನ ಮೇಜಿಸ್ಟ್ರೇಟ್ ಕೋರ್ಟಿಗೆ ತಮ್ಮ ಮೇಲಿನ ಮೊಕ್ಕದ್ದಮೆಗಾಗಿ ಕೋರ್ಟಿಗೆ ಹಾಜರಾಗಲು ಬಂದಿದ್ದ ಪ್ರೊ.ಕೆ.ಎಸ್.ಭಗವಾನ್ ಅವರ ಮೇಲೆ ವಕೀಲೆ ಮೀರಾ ರಾಘವೇಂದ್ರ ಅವರು ಕೋರ್ಟಿನ ಆವರಣದಲ್ಲೇ ಮುಖಕ್ಕೆ ಮಸಿ ಬಳಿದು ಹಲ್ಲೆ ಮಾಡಿದ್ದಾರೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯೊಬ್ಬರ ಮೇಲೆ ತಾವೇ ಕೇಸನ್ನು ಹಾಕಿ, ಅವರು ನ್ಯಾಯಾಲಯದ ಕರೆಗೆ ಗೌರವಿಸಿ ನ್ಯಾಯಾಲಯಕ್ಕೆ ಬಂದಾಗ ಅವರ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಲ್ಲೆ ಮಾಡಿರುವುದು ಕಕ್ಷಿದಾರರಿಗೆ ನ್ಯಾಯಾಲಯಕ್ಕೆ ಬರುವ ಧೈರ್ಯವೇ ದುರುದ್ದೇಶಪೂರ್ವಕ. ಇದರಿಂದಾಗಿ ಕಕ್ಷಿದಾರರಿಗೆ ನ್ಯಾಯಾಲಯಕ್ಕೆ ಇಲ್ಲದಂತಾಗಬಹುದು ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.

ವಕೀಲೆಯ ಈ ಕೃತ್ಯ ಇಡೀ ವಕೀಲ ಸಮುದಾಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ನ್ಯಾಯಾಲಯದ ಮೇಲೆ ನಂಬಿಕೆಯಿಲ್ಲದೆ ತಾವೇ ನ್ಯಾಯವನ್ನು ಕೈಗೆ ತೆಗೆದುಕೊಳ್ಳುವವರು ವಕೀಲ ವೃತ್ತಿಯಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಕಿಡಿಕಾರಿದ್ದಾರೆ.lawyer-Meera Raghavendra-opposite-order-Attorney-Dr.C.S.Dwarkanath-Insist

ವಕೀಲೆಯ ಈ ಕೃತ್ಯ ನೇರವಾಗಿ ವಕೀಲ ವೃತ್ತಿಗೆ ಕಳಂಕ ತರುವಂತಹದ್ದು, ವಕೀಲರ ಘನತೆಗೆ ದಕ್ಕೆ ತರುವಂತಹದ್ದು. ಈ ಕಾರಣಕ್ಕೆ ವಕೀಲರ ಪರಿಷತ್ತು ಈಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

key words : lawyer-Meera Raghavendra-opposite-order-Attorney-Dr.C.S.Dwarkanath-Insist