ಇಂದು ಲಸಿತ್ ಮಾಲಿಂಗಾ ಕೊನೆ ಏಕದಿನ ಪಂದ್ಯ

ಕೊಲೊಂಬೊ, ಜುಲೈ 26, 20118 (www.justkannada.in): ಶ್ರೀಲಂಕಾದ ವೇಗದ ಬೌಲರ್ ಲಸಿತ ಮಾಲಿಂಗ ಇಂದು ತಮ್ಮ ವೃತ್ತಿ ಜೀವನ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.

ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಈ ಪಂದ್ಯ ಕೊಲಂಬೊದಲ್ಲಿ ನಡೆಯಲಿದ್ದು, ಮಾಲಿಂಗ ಕೊನೆ ಬಾರಿಗೆ ಅಂಗಳಕ್ಕಿಳಿಯಲಿದ್ದಾರೆ.

ಈ ಸರಣಿಯಲ್ಲಿ 3 ಏಕದಿನ ಮುಖಾಮುಖೀ ನಡೆಯಲಿದ್ದು, ಶುಕ್ರವಾರದ ಮೊದಲ ಪಂದ್ಯ ಲಸಿತ ಮಾಲಿಂಗ ಪಾಲಿನ ‘ವಿದಾಯ ಪಂದ್ಯ’ವಾಗಲಿದೆ.