ಕನ್ನಡಿಗರಲ್ಲದವರಿಗೆ ಇಲ್ಲಿದೆ ಲ್ಯಾಂಗ್ವೇಜ್ ಮ್ಯಾಪ್ ಅಥಾವ ಭಾಷಾ ನಕ್ಷೆ

ಬೆಂಗಳೂರು:ಆ-27:(www.justkannada.in) ನಿಮಗೆ ಕನ್ನಡ ಗೊತ್ತಿಲ್ಲವೇ? ಹಾಗಾದರೆ ಚಿಂತಿಸಬೇಡಿ. ಸದಾ ನಿಮ್ಮೊಂದಿಗೆ ಕೊಂಡೊಯ್ಯಬಹುದಾದ ಲ್ಯಾಂಗ್ವೇಜ್ ಮ್ಯಾಪ್ ಅಥವಾ ಭಾಷಾ ನಕ್ಷೆಯೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಕನ್ನಡ ಭಾಷೆ ಗೊತ್ತಿಲ್ಲದವರು ಕೂಡ ಸರಾಗವಾಗಿ ಕನ್ನಡದಲ್ಲಿ ಸಂವಹನ ಮಾಡಬಹುದಾಗಿದೆ.

27 ವರ್ಷದ ಆಕಾಶ್ ಸಿಂಗ್ ಎಂಬುವವರು ಕನ್ನಡ ಗೊತ್ತು (ನನಗೆ ಕನ್ನಡ ಗೊತ್ತು) ಲ್ಯಾಂಗ್ವೇಜ್ ಮ್ಯಾಪ್ ಅಥವಾ ಭಾಷಾ ನಕ್ಷೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕರಪತ್ರ ಅಥವಾ ಪಾಂಪ್ಲೆಟ್ ರೀತಿಯ ಪೇಪರ್ ಒಂದರಲ್ಲಿ ಹಲವಾರು ವಾಕ್ಯಗಳು, ಪದಗಳನ್ನು ಬರೆಯಲಾಗಿದೆ. ಈ ಪಾಂಪ್ಲೆಟ್ ನ್ನು ತೆಗೆದುಕೊಂಡು ಹೋಗುವುದರಿಂದ ಬಳಕೆದಾರರಿಗೆ ದಿನನಿತ್ಯ ಸಂವಹನ ನಡೆಸಲು ಸಹಾಯವಾಗುತ್ತದೆ.

ಆಕಾಶ್ ಅವರು ಉನ್ನತ ವ್ಯಾಸಂಗಕ್ಕಾಗಿ ಛತ್ತೀಸ್ ಗಢದಿದ ಬೆಂಗಳೂರಿಗೆ ಬಂದಿದ್ದು, ಈ ವೇಳೆ ಅವರಿಗೆ ಕನ್ನಡದವರ ಜತೆ ಸಂವಹನನಡೆಸುವುದು ಕಷ್ಟವಾಗುತ್ತಿತ್ತಂತೆ. ಆಗ ಅವರಿಗೆ ಹೊಳೆದಿದ್ದೇ ಈ ಲ್ಯಾಂಗ್ವೇಜ್ ಮ್ಯಾಪ್ ಐಡಿಯಾ.

ಎರಡು ಮೂರು ವರ್ಷಗಳ ಹಿಂದೆ ಈ ಯೋಜನೆಯನ್ನು ತಮ್ಮ ಕಾಲೇಜಿನಲ್ಲಿ ಪ್ರಾರಂಭಿಸಿದ್ದಾಗಿ ಹಾಗೂ ಇದರಿಂದ ಬೇರೆಯವರ ಜತೆ ಸಂವಹನ ನಡೆಸಲು ತಮಗೆ ಸಹಕಾರಿಯಾಗಿದ್ದಾಗಿ ಹೇಳುತ್ತಾರೆ. ಈ ಭಾಷಾ ನಕ್ಷೆ ಕನ್ನಡವನ್ನು ಸಂಪೂರ್ಣವಾಗಿ ಕಲಿಸಿಕೊಡುವುದಿಲ್ಲ. ಆದರೆ ಮಾರ್ಗದರ್ಶನ ನೀಡುತ್ತದೆ.

ಪ್ರವಾಸಿಗರಿಗೆ ಈ ಮ್ಯಾಪ್ ಸಹಾಯಕಾರಿಯಾಗಿದೆ. ಆಟೋ ಡ್ರೈವರ್, ಬಿಎಂಟಿಸಿ ಬಸ್‌ ಗಳಲ್ಲಿ ಕಂಡಕ್ಟರ್, ಹಾಗೂ ಅಂಗಡಿಯವರು ಅಥವಾ ರಸ್ತೆ ಬದಿಯ ಮಾರಾಟಗಾರರೊಂದಿಗೆ ಮಾತನಾಡಲು ಅಗತ್ಯಾವಾದ ಪದಗಳ ಹಾಗೂ ವಾಕ್ಯಗಳ ಬಳಕೆ ಮಾಡಲು ಇದು ಸಹಾಯವಾಗುತ್ತದೆ.

ಜನರು, ಸಂಸ್ಕೃತಿ-ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳುವ ನಡುವಿನ ಅಂತರವನ್ನು ನಿವಾರಿಸುವಲ್ಲಿ ಭಾಷಾ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡ ಗೊತ್ತು ದಿನನಿತ್ಯದ ಪರಸ್ಪರ ಸಂವಹನಕ್ಕೆ ಸಹಕಾರಿಯಾಗಿದೆ. ಈ ಪ್ರತಿಗಳನ್ನು ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಇಡಲು ನಾನು ಯೋಜಿಸುತ್ತಿದ್ದೇನೆ ಎಂದು ಆಕಾಶ್ ತಿಳಿಸಿದ್ದಾರೆ.

ಕನ್ನಡಿಗರಲ್ಲದವರಿಗೆ ಇಲ್ಲಿದೆ ಲ್ಯಾಂಗ್ವೇಜ್ ಮ್ಯಾಪ್ ಅಥಾವ ಭಾಷಾ ನಕ್ಷೆ

Language map for non-Kannadigas