ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಆ.8 ರಂದು ‘ಭೂಮಿ ಮಾರಾಟಕ್ಕಿಲ್ಲ’ ನಾಮಫಲಕ ಅನಾವರಣ- ಬಡಗಲಪುರ ನಾಗೇಂದ್ರ…

ಮೈಸೂರು,ಜು,25,2020(www.justkannada.in): ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವುದನ್ನ ವಿರೋಧಿಸಿ ಆಗಸ್ಟ್ 8 ರಂದು ಭೂಮಿ ಮಾರಾಟಕ್ಕಿಲ್ಲ ಎಂಬ ನಾಮಫಲಕವನ್ನು ಅನಾವರಣಗೊಳಿಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.jk-logo-justkannada-logo

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸುದ್ದಿಗೋಷ್ಠಿ ನಡೆಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ, ಆಗಸ್ಟ್ ತಿಂಗಳಲ್ಲಿ ರೈತ ಸಂಘದ ವತಿಯಿಂದ ಎರಡು ಕಾರ್ಯಕ್ರಯಗಳನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 8 ರಂದು ಭೂಮಿ ಮಾರಾಟಕ್ಕಿಲ್ಲ ಎಂಬ ನಾಮಫಲಕವನ್ನು ಅನಾವರಣಗೊಳಿಸಲಾಗುವುದು. ಆ ನಾಮಫಲಕವನ್ನು ಪ್ರತಿ ಜಿಲ್ಲೆಯ ಒಂದು ಗ್ರಾಮದ ಸಮಸ್ತ ಜನರಿಂದ ಈ ನಾಮಫಲಕವನ್ನು ಅನಾವರಣಗೊಳಿಸಲಾಗುವುದು. ನಿರಂತರವಾಗಿ ಈ ನಾಮಫಲಕ ಆಂದೋಲನವನ್ನು ರಾಜ್ಯದ ಪ್ರತಿ ಹಳ್ಳಿ ಹಳ್ಳಿಗೂ ವಿಸ್ತರಿಸಲಾಗುವುದು. ರೈತರ ಹಕ್ಕುಗಳನ್ನು ಕಸಿಯುತ್ತಿರುವುದನ್ನು ವಿರೋಧಿಸಿ ಇದೇ ಆಗಸ್ಟ್ 15 ರಂದು ಬೆಂಗಳೂರಿನ ಆನಂದ ರಾವ್ ಸರ್ಕಲ್ ನಲ್ಲಿ ಧರಣಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.Land not sold – Nameplate- mysore- Badagalapura Nagendra

ಇನ್ನು ಹಳ್ಳಿಗಳಲ್ಲಿ ಕರೆಂಟ್ ಹಾಗೂ ನೆಟ್ ವರ್ಕ್ ಸಮಸ್ಯೆ ಇರುತ್ತದೆ ಜೊತೆಗೆ ಹಳ್ಳಿಯ ಮಕ್ಕಳಿಗೆ ತಂತ್ರಜ್ಞಾನದ ಕೊರತೆ ಇರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಆನ್ ಲೈನ್ ಶಿಕ್ಷಣ ನೀಡದಂತೆ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಜೊತೆಗೆ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಬಡಗಲಪುರ ನಾಗೇಂದ್ರ, ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರ ಖರೀದಿಸಿದ ಉಪಕರಣಗಳಲ್ಲಿ ಅವ್ಯವಹಾರ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿದರು.

Key words: Land not sold – Nameplate- mysore- Badagalapura Nagendra .