ಸಾ.ರಾ. ಕಲ್ಯಾಣ ಮಂಟಪ ಸ್ಥಳ ವಿವಾದ ಕೇಸ್: ಭೂ ದಾಖಲೆ ಇಲಾಖೆ ಜಂಟಿ ನಿರ್ದೇಶಕರ ತಂಡದಿಂದ ಸರ್ವೆ ಕಾರ್ಯ.

kannada t-shirts

ಮೈಸೂರು,ಜೂನ್,11,2021(www.justkannada.in): ಮೈಸೂರು ಭೂ ಅಕ್ರಮ ತನಿಖೆ ಶುರುವಾಗಿದ್ದು, ಈ ಮಧ್ಯೆ ಸಾರಾ. ಕಲ್ಯಾಣಮಂಟಪ ಸ್ಥಳವಿವಾದಕ್ಕೆ ಸಂಬಂಧಿಸಿದಂತೆ ಭೂ ದಾಖಲೆ ಇಲಾಖೆ ಜಂಟಿ ನಿರ್ದೇಶಕರ ತಂಡದಿಂದ ಸರ್ವೆ ನಡೆಯುತ್ತಿದೆ.jk

ಪ್ರಸಾದ್ ಕುಲಕರ್ಣಿ ಅವರ ನೇತೃತ್ವದ 11 ಜನರ ತಂಡದಿಂದ ಸರ್ವೆ ಕಾರ್ಯ ನಡೆಯುತ್ತಿದ್ದು, ಪ್ರಾದೇಶಿಕ ಆಯುಕ್ತರು ಸೂಚನೆಯಂತೆ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಪ್ರಸಾದ್ ಕುಲಕರ್ಣಿ  ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾದೇಶಿಕ ಆಯುಕ್ತ ಜಿ.ಸಿ ಪ್ರಕಾಶ್ , ಸಾರಾ ಚೌಲ್ಟ್ರಿ ವಿವಾದ ಅಷ್ಟೇ ಅಲ್ಲ, ಎಲ್ಲವೂ ತನಿಖೆ ಆಗುತ್ತಿದೆ. ಪ್ರತಿಭಟನೆ ಹಿಂದಿನ ದಿನವೇ ಶಾಸಕರು ನಮಗೆ ಮನವಿ ಕೊಟ್ಟಿದ್ದರು. ಮನವಿ ಆಧಾರದ ಮೇಲೆ ನಾನು ತನಿಖಾ ಸಮಿತಿ ರಚಿಸಿದ್ದೇನೆ. ಮೈಸೂರಿನ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹೊರಡಿಸಿದ ನಾಲ್ಕೂ ಆದೇಶಗಳ‌ ಬಗ್ಗೆ ತನಿಖೆ ನಡೆಯುತ್ತಿದೆ. ಶಾಸಕರು ಸಾರಾ ಚೌಲ್ಟ್ರಿ ಬಗ್ಗೆ ಮನವಿ ಮಾಡಿದ್ದರಿಂದ ತನಿಖೆಗೆ ಆದೇಶಿಸಿದ್ದೇನೆ. ಯಾವುದೇ ಭೂ ಅಕ್ರಮಗಳ ಬಗ್ಗೆ ದೂರು ಬಂದರು ತನಿಖೆ ಮಾಡುತ್ತೇವೆ ಎಂದು ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ಈ ಕುರಿತು ಎಸಿ ವೆಂಕಟರಾಜು ಪ್ರತಿಕ್ರಿಯಿಸಿ, ಪ್ರಾದೇಶಿಕ ಆಯುಕ್ತರ ಸೂಚನೆಯಂತೆ ಸರ್ವೇ ಕಾರ್ಯ ನಡೆಯುತ್ತಿದೆ. ಸಾರಾ ಭವನ ರಾಜಕಾಲುವೆ ಮೇಲೆ ಕಟ್ಟಲಾಗಿದೆ‌ ಎಂಬ ಆರೋಪ ಹಿನ್ನಲೆ,  ಈ ಅಂಶದ ಮೇಲೆ ಸರ್ವೇ ಕಾರ್ಯ ನಡೆಯುತ್ತಿದೆ. ಇದೇ ಅಂಶವನ್ನ ಇಟ್ಟುಕೊಂಡು ಸರ್ವೇ ಮಾಡುತ್ತಿದ್ದೇವೆ. ಸರ್ವೇ ನಂಬರ್ 130/3 ಸೇರಿದಂತೆ ಅಕ್ಕಪಕ್ಕದ ಸರ್ವೇ ನಂಬರ್‌ನಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಈ ಎಲ್ಲ ಸರ್ವೇ ಆದ ನಂತರ ಪ್ರಾದೇಶಿಕ ಆಯುಕ್ತರಿಗೆ ವರದಿ ಕೊಡ್ತೇವೆ ಎಂದು ತಿಳಿಸಿದರು.

ದೂರುದಾರ ಎನ್. ಗಂಗರಾಜು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಮಾತಿನ ಚಕಮಕಿ.

ಶಾಸಕ ಸಾರಾ ಮಹೇಶ್ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ದೂರುದಾರ ಎನ್. ಗಂಗರಾಜು ಮತ್ತು ಪ್ರಾದೇಶಿಕ ಆಯುಕ್ತ ಡಾ. ಜಿ.ಜಿ. ಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆಯಿತು.

ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರಡಿಸಿರುವ  ನಾಲ್ಕು ಆದೇಶಗಳ ಬಗ್ಗೆ ತನಿಖೆ ನಡೆಸಬೇಕು. ಕೇವಲ ಸಾರಾ ಚೌಲ್ಟ್ರಿ ಬಗ್ಗೆ ಮಾತ್ರ ವಿಶೇಷ ಮುತುವರ್ಜಿ ಯಾಕೆ. ನೀವು ಉದ್ದೇಶ ಪೂರ್ವಕವಾಗಿ ತನಿಖೆ ದಿಕ್ಕು ತಪ್ಪಿಸುತ್ತಿದ್ದೀರಿ‌ ಎಂದು  ದೂರದಾರ ಗಂಗರಾಜು ಗಂಭೀರ ಆರೋಪ ಮಾಡಿದರು.

ಶಾಸಕ ಸಾರಾ ಮಹೇಶ್ ಕೊಟ್ಟ ದೂರಿನ ಆಧಾರದ ಮೇಲೆ ತನಿಖೆಗೆ ಸೂಚಿಸಿದ್ದೇನೆ. ಜನಪ್ರತಿನಿಧಿ ಪ್ರತಿಭಟನೆ ನಡೆಸಿದರೆ ನ್ಯೂಸೆನ್ಸ್ ಕ್ರಿಯೇಟ್ ಆಗುತ್ತೆ ಅಂತ ಆದ್ಯತೆ ಕೊಟ್ಟಿದ್ದೇನೆ. ಇದರಲ್ಲಿ ನನ್ನ ಪಾತ್ರ ಏನು ಇಲ್ಲ  ಎಂದು ಜಿ.ಜಿ. ಪ್ರಕಾಶ್ ಸಮರ್ಥಿಸಿಕೊಳ್ಳಲು ಮುಂದಾದರು.

Key words: Land-illegality-mysore-sara choultry- Survey – Regional Commissioner- GC Prakash.

 

website developers in mysore