ಭೂಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಮರಣ ಶಾಸನ ಬರೆದಂತೆ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ಕುರುಬೂರು ಶಾಂತಕುಮಾರ್

ಮೈಸೂರು,ಜೂ,13,2020(www.justkannada.in): ಭೂಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿ ಮಾಡುವುದು ರೈತರ ಮರಣ ಶಾಸನ ಬರೆದಂತೆ. ಸರ್ಕಾರ ಈ ನಿರ್ಧಾರ ಕೈಬಿಡದಿದ್ದರೇ ರಾಜ್ಯದಾದ್ಯಂತ ಹೊರಟ ಮಾಡವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಕುರುಬೂರು ಶಾಂತಕುಮಾರ್, ಕಾರ್ಪೊರೇಟ್ ಕಂಪನಿಗಳನ್ನ ಹಾಗು ಶ್ರೀಮಂತರನ್ನ ಓಲೈಸುವ ಕೆಲಸ‌ ಇದಾಗಿದೆ. ರಾಜ್ಯದಾದ್ಯಂತ ಕೈಗಾರಿಕೋದ್ಯಮಿಗಳು ಮತ್ತು ರಿಯಲ್ ಎಸ್ಟೇಟ್ ಮಾಡುವವರು 20 ಲಕ್ಷ ಹೆಕ್ಟೇರ್ ಭೂಮಿ ಖರೀದಿಸಿ ಪಾಳು ಬಿಟ್ಟಿದ್ದಾರೆ.ಇಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಕಾಯ್ದೆ ತಿದ್ದುಪಡಿ ಸರಿಯಲ್ಲ ಎಂದು ಟೀಕಿಸಿದರು.land-amendment-farmer-kurubur-shanthakumar-warning-government

ಕೃಷಿ ಭೂಮಿ ಹೊಂದಿರುವವರು ಮಾತ್ರ ಕೃಷಿ ಭೂಮಿ ಖರೀದಿ ಮಾಡಬೇಕಿತ್ತು ಅದನ್ನ ಈಗ ರದ್ದು ಮಾಡಿದ್ದಾರೆ. ಸಣ್ಣ ಕೃಷಿಕರು ಭೂಮಿ ಮಾರಟ ಮಾಡಿ ನಗರಗಳತ್ತ ವಲಸೆ ಹೊಗುವಂತೆ ಈ ಸರ್ಕಾರ ಮಾಡುತ್ತಿದೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸ್ವತಃ ಯಡಿಯೂರಪ್ಪ ವಿರೋಧ ಮಾಡಿದ್ರು. ಆದ್ರ ಈಗ ಯಡಿಯೂರಪ್ಪ ನವ್ರೆ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಇದು ಖಂಡನೀಯ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ. ಕೂಡಲ ಸರ್ಕಾರ ಈ ನಿರ್ಧರ ಕೈಬಿಡಬೇಕು. ಇಲ್ಲದಿದ್ದರೇ ರಾಜ್ಯದಾದ್ಯಂತ ಹೊರಟ ಮಾಡವುದಾಗಿ  ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.

Key words: Land Amendment – farmer-Kurubur Shanthakumar – warning – government