ಬೆಂಗಳೂರಿನಲ್ಲಿ ಶೇ. 50ರಷ್ಟು ಆ್ಯಂಟಿಜನ್ ಟೆಸ್ಟ್ ಮಾಡಲು ತೀರ್ಮಾನ-ಆರೋಗ್ಯ ಸಚಿವ ಶ್ರೀರಾಮುಲು…

ಬೆಂಗಳೂರು,ಜು,21,2020(www.justkannada.in): ಬೆಂಗಳೂರಿನಲ್ಲಿ ಶೇ. 50ರಷ್ಟು ಆ್ಯಂಟಿಜನ್ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದ್ದು,  5 ಲಕ್ಷ ಆಂಟ್ಯಿಜನ್ ಕಿಟ್ ಖರೀದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.jk-logo-justkannada-logo

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಬೆಂಗಳೂರಿನಲ್ಲಿ ಶೇ. 50ರಷ್ಟು ಆ್ಯಂಟಿಜನ್ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ,  ಇದಕ್ಕಾಗಿ 5 ಲಕ್ಷ ಆಂಟ್ಯಿಜನ್ ಕಿಟ್ ಖರೀದಿಗೆ ಸಿಎಂ ಸೂಚನೆ ನೀಡಿದ್ದಾರೆ. ಆ್ಯಂಟಿಜನ್ ಟೆಸ್ಟ್ ನಿಂದ ಕೇವಲ 30 ನಿಮಿಷದಲ್ಲಿ ವರದಿ ಸಿಗುತ್ತದೆ ಎಂದು ತಿಳಿಸಿದರು.lakhs-buy-antigen-kit-health-minister-sriramulu

ಖಾಸಗಿ ಆಸ್ಪತ್ರೆಗಳಿಂದ ಬೆಡ್ ನೀಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನಿನ್ನೆ ಬೆಂಗಳೂರು ಸಂಬಂಧ ಸಿಎಂ ಟಾಸ್ಕ್ ಫೋರ್ಸ್ ಸಭೆ ನಡೆಸಿದರು. ಈ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಇನ್ನು ಶೇ.50ರಷ್ಟು ಬೆಡ್ ನೀಡಲು ಮೆಡಿಕಲ್ ಕಾಲೇಜುಗಳು ಲಿಖಿತವಾಗಿ ಬರೆದುಕೊಟ್ಟಿದ್ದಾರೆ ಎಂದು ಹೇಳಿದರು.

Key words: Lakhs-buy –Antigen- Kit-Health Minister -Sriramulu.