ಗಾಯಕರಾದ ಲಹರಿ ವೇಲು !

kannada t-shirts

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಕೆಲ ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ ಲಹರಿ ವೇಲು ಈಗ ಗಾಯಕರಾಗುತ್ತಿದ್ದಾರೆ !

ಹೌದು. ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ‘ವಿಂಡೊ’ ಸಿನಿಮಾದ ಹಾಡಿಗೆ ವೇಲು ದನಿಯಾಗಿದ್ದಾರೆ. ಅಭಿಮಾನ್​ ರಾಯ್​ ಅವರ ಮ್ಯೂಸಿಕಲ್​ ಸಿನಿಮಾದ ಹಾಡನ್ನು ಲಹರಿ ವೇಲು ಅವರೇ ಹಾಡಿದ್ದಾರೆ. ಈ ಸಿನಿಮಾದ ಹಾಡಿನ ಟೀಸರ್​ ಬಿಡುಗಡೆಯಾಗಿದೆ.

ಈ ಸಿನಿಮಾದ ಹಾಡೇ ಹೇಳುವಂತೆ ಕಾರ್ಪೋರೇಟ್​ ಜಗತ್ತಿನಲ್ಲಿ ಸಾಫ್ಟ್​ವೇರ್​ ಉದ್ಯೋಗದಲ್ಲಿರುವ ದಂಪತಿಗಳ ಕಷ್ಟದ ಕತೆಯಾಧಾರಿತ ಚಿತ್ರ ಇದಾಗಿದೆ. ಸಂಗೀತ ನಿರ್ದೇಶಕ ಅಭಿಮಾನ್​ ರಾಯ್​ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಿತರಾಗುತ್ತಿದ್ದಾರೆ.

website developers in mysore