ಆರ್ ಆರ್ ಆರ್ ಆಡಿಯೋ ಹಕ್ಕು ಖರೀದಿಸಿದ ಲಹರಿ

ಬೆಂಗಳೂರು, 27, ಜುಲೈ 2021 (www.justkannada.in): ಆರ್ ಆರ್ ಆರ್ ಸಿನಿಮಾದ ಆಡಿಯೋ ಹಕ್ಕನ್ನ ಲಹರಿ ಸಂಸ್ಥೆ ಖರೀದಿಸಿದೆ.

ರಾಜಮೌಳಿ ನಿರ್ದೇಶನದಲ್ಲಿ ರಾಮ್ ಚರಣ್, ಜ್ಯೂನಿಯರ್ ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್ ನಟಿಸುತ್ತಿದ್ದಾರೆ.

ಈ ಸಿನಿಮಾಗೆ ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳ ಹಕ್ಕುಗಳನ್ನು ಲಹರಿ ಸಂಸ್ಥೆ ಪಡೆದಿದೆ.

ಅಂದಹಾಗೆ ಇತ್ತೀಚೆಗಷ್ಟೇ ಕೆಜಿಎಫ್ 2 ಸಿನಿಮಾದ ಹಾಡುಗಳನ್ನು 6 ಕೋಟಿಗೂ ಹೆಚ್ಚು ಮೊತ್ತ ಕೊಟ್ಟು ಖರೀದಿಸಿ ದಾಖಲೆ ಬರೆದಿತ್ತು.