ಕುವೆಂಪು ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ-ಸಿದ್ಧರಾಮಯ್ಯ ವಿರುದ್ಧ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಾಗ್ದಾಳಿ.

ಮೈಸೂರು,ಮೇ,24,2022(www.justkannada.in): ಪಠ್ಯ ಪುಸ್ತಕದಲ್ಲಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕುವೆಂಪು ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ. ಕಾಂಗ್ರೆಸ್ ನವರು ಸುಳ್ಳನ್ನು ಹಬ್ಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ  ಮಾತನಾಡಿದ ಶಿಕ್ಷಣ ಸಚಿವ ಬಿ. ಸಿ ನಾಗೇಶ್ , ಕಾಂಗ್ರೆಸ್ ನವರು ಟಿಪ್ಪು, ನಾರಾಯಣ್ ಗುರು, ಭಗತ್ ಸಿಂಗ್, ಬಸವಣ್ಣ ಮೇಲೆ ಸುಳ್ಳು ಹಬ್ಬಿಸಿದರು. ಆ ಸುಳ್ಳುಗಳು ಫೇಲ್ ಆದ ಮೇಲೆ ಕುವೆಂಪು ಅವರನ್ನು ಹಿಡಿದುಕೊಂಡಿದ್ದಾರೆ. ಅದು ಸಹಾ ಮಿಸ್ ಫೈರ್ ಆಗಿದೆ. ಸಿದ್ದರಾಮಯ್ಯ ಕುವೆಂಪು ಅವರ ಕ್ಷಮೆಯಾಚಿಸಬೇಕು. ಕುವೆಂಪು ಅವರ ನಾಲ್ಕು ಪಾಠವನ್ನು ಸಿದ್ದು ಕೈ ಬಿಟ್ಟಿದ್ದರು. ನಾವು ಅದನ್ನು ಸೇರಿಸುವ ಪ್ರಯತ್ನ ಮಾಡಿದ್ದೇವೆ. ಈ ದೇಶ ಸಂಸ್ಕೃತಿ ಬಗ್ಗೆ ಮಾತನಾಡಿದನ್ನು ಅವರು ತೆಗೆದು ಹಾಕಿದ್ದಾರೆ. ದಯಮಾಡಿ ಕಾಂಗ್ರೆಸ್ ಪುಸ್ತಕವನ್ನು ಓದಿ. ಕಂಟೆಂಟ್ ಇಟ್ಟುಕೊಂಡು ವಾದ ಮಾಡಿ. ಅದು ಬಿಟ್ಟು ವ್ಯಕ್ತಿಗತವಾಗಿ ವಾದ ಮಾಡಬೇಡಿ ಅದು ಸರಿಯಲ್ಲ ಎಂದು ಚಾಟಿ ಬೀಸಿದರು.

ಪಠ್ಯದಲ್ಲಿ ಕೇಸರಿಕರಣ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿಸಿ ನಾಗೇಶ್, ಕಾಂಗ್ರೆಸ್‌ ಕನ್ನಡಕದಿಂದ ಆ ರೀತಿ ಕಾಣುತ್ತಿರಬಹುದು. ನನ್ನ ಕನ್ನಡಕದಲ್ಲಿ ಯಾವುದೇ ಬಣ್ಣ ಕಾಣುತ್ತಿಲ್ಲ. ನಮಗೆ ಕಮ್ಯುನಿಸ್ಟ್ ಅಥವಾ ಬೇರೆ ಬಣ್ಣ ಕಾಣಲ್ಲ. ಟಿಪ್ಪು ಸುಲ್ತಾನ್ ಪುಸ್ತಕ ತಂದರು ನಮಗೆ ಬಣ್ಣ ಕಾಣಲಿಲ್ಲ. ನಮಗೆ ಮಕ್ಕಳು ಮಾತ್ರ ಕಾಣಿಸುತ್ತಾರೆ. ಕಾಂಗ್ರೆಸ್ ಜೀವನದುದ್ದಕ್ಕೂ ಬಣ್ಣ ಕಂಡಿದೆ. ಮತ ಬಿಟ್ಟು ಬೇರೆ ಏನನ್ನು ಯೋಚನೆ ಮಾಡಿದವರಲ್ಲ. ಹಸಿರು ಬಣ್ಣದವರು ಮತ ಹಾಕಲ್ಲ ಅಂತಾ ಅವರಿಗೆ ಭಯ. ಯಾವ ಕಾಂಗ್ರೆಸ್ ಪಕ್ಷದವರು ಪಠ್ಯ ಪುಸ್ತಕವನ್ನೇ ಓದಿಲ್ಲ. ಇದಕ್ಕೆ ಸಾಕ್ಷಿ ಅವರು ಮಾಡಿರುವ ಟ್ವೀಟ್‌ ಗಳು. ಕಾಂಗ್ರೆಸ್ ಶಿಕ್ಷಣ ಇಲಾಖೆಯನ್ನು ಮತ ಬ್ಯಾಂಕ್ ಮಾಡಿತ್ತು. ಅದಕ್ಕಾಗಿ ಪಠ್ಯದಲ್ಲಿ ತಪ್ಪುಗಳಾಗಿತ್ತು ಎಂದು ಕಿಡಿಕಾರಿದರು.

ಟಿಪ್ಪು ವಿರುದ್ದ ವಾಗ್ದಾಳಿ ನಡೆಸಿದ ಬಿ ಸಿ ನಾಗೇಶ್, ಅವನೊಬ್ಬನೇನಾ ಸ್ವಾತಂತ್ರ್ಯ ಹೋರಾಟಗಾರ ? ಸಂಗೊಳ್ಳಿ ರಾಯಣ್ಣ ಕಿತ್ತೂರು ಚೆನ್ನಮ್ಮ ಇರಲಿಲ್ಲವಾ ? ಮೈಸೂರು ಮಹಾರಾಜರಿಗೆ ಅನ್ಯಾಯವಾಗಿದ್ದರೆ ಅದು ಹೈದರಾಲಿ ಹಾಗೂ ಟಿಪ್ಪುವಿನಿಂದ. ಟಿಪ್ಪುವಿನಿಂದ ಕನ್ನಡಕ್ಕೆ ಅನ್ಯಾಯವಾಗಿದೆ. ಪರ್ಷಿಯನ್ ಭಾಷೆ ಏಕೆ ತರಬೇಕಾಗಿತ್ತು ? ನಾವು ಮಕ್ಕಳ ಭವಿಷ್ಯಕ್ಕಾಗಿ ಪುಸ್ತಕ ರಚನೆ ಮಾಡದ್ದೇವೆ. ಮಾಹಿತಿಗಾಗಿ ಯಾವ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ತಪ್ಪುಗಳನ್ನು ಪಠ್ಯದಲ್ಲಿ ಹಾಕಿದ್ರೆ ಸರಿಯಿರಲ್ಲ ಎಂದರು.

ಮತ್ತೆ ಪಠ್ಯ ಪುಸ್ತಕ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ಪುಸ್ತಕ ಈಗಾಗಲೇ ಮುದ್ರಣವಾಗಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟನೆ ನೀಡಿದರು.

ಪಠ್ಯ ಪುಸ್ತಕದ ಸಮಿತಿ ಅಧ್ಯಕ್ಷರ ವಿರುದ್ದ ಸಿದ್ದರಾಮಯ್ಯ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಬಿ.ಸಿ ನಾಗೇಶ್, ಇದು ಸಿದ್ದರಾಮಯ್ಯ ದುರಂಹಕಾರವನ್ನು ತೋರಿಸುತ್ತದೆ. ನಾನು ಒಬ್ಬನೇ ಸರಿ ನಾನು ಮಾಡಿದ್ದೇ ಸರಿ, ನನಗೆ ಎಲ್ಲಾ ಗೊತ್ತಿರೋದು, ಅವಹೇಳನ ಮಾತುಗಳು ಗೌರವ ಕೊಡದಿರುವುದು. ಯಾವಾಗಲೂ ಏಕವಚನದಲ್ಲಿ ಮಾತನಾಡುತ್ತಾರೆ. ಇದಕ್ಕೆ ಕಾರಣ ಅವರ ಹಿಂದೆ ಇರುವ ತಂಡ. ಪಾಪ ಸಿದ್ದರಾಮಯ್ಯ ಅವರು ಇದಕ್ಕೆ ಕಾರಣರಲ್ಲ ಎಂದು ಹರಿಹಾಯ್ದರು.

ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ದ ಆರೋಪ ವಿಚಾರ. ನಾಡಗೀತೆಗೆ ಅವಮಾನ ಮಾಡಿದ್ದ ವಿಚಾರ. ಆ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಲಾಗಿದೆ. ಖುದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಿ ರಿಪೋರ್ಟ್ ಹಾಕಲಾಗಿದೆ. ಒಂದು ವೇಳೆ ತಪ್ಪು ಮಾಡಿದ್ದರೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕಬೇಕಿತ್ತು ? ಸಿದ್ದರಾಮಯ್ಯ ಏಕೆ ಬಿ ರಿಪೋರ್ಟ್ ಕೊಡಿಸಿದರು. ಆರೋಪ ಮಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇರಬೇಕು. ದೇಶದ ಧ್ವಜದ ಪಾಠ ತೆಗೆದು ಹಾಕಿದವರಿಗೆ ಯಾವ ನೈತಿಕತೆ ಇದೆ.ಬಾವುಟ ಏರಲು ಇವರು ಏಕೆ ಸಹಿಸುವುದಿಲ್ಲ ..? ಎಂದು ಬಿಸಿ ನಾಗೇಶ್ ಪ್ರಶ್ನಿಸಿದರು.

Key words: Kuvempu – insult – Congress –responsible-Minister – BC Nagesh.

ENGLISH SUMMARY..

If there is any insult caused to national poet Kuvempu, then Siddaramaiah is responsible: Education Minister B.C. Nagesh
Mysuru, May 24, 2022 (www.justkannada.in): Responding to allegations of insulting national poet Kuvempu in the new textbooks, Primary and Secondary Education Minister B.C. Nagesh today observed that if there is any insult caused to Kuvempu then Siddaramaiah is responsible for it, as the Congress people are spreading lies.
Speaking in Mysuru today, the Education Minister said, “The Congress people spread lies about Tipu, Narayan Guru, Bhagat Singh, and Basavanna. When all those failed now they are raising the Kuvmepu issue. But unfortunately, even that also has misfired. Siddaramaiah should apologize before Kuvempu. Four lessons were dropped from the curriculum during Siddaramaiah’s tenure. We have tried to include it. It was they who had removed information about our country and culture. I request the Congress people to please read the book, keep the content in hand and then argue. Please don’t argue on personal grounds, it is not correct.”
Replying to a question the Minister informed that there is no question of revising the textbooks, as it is already printed.
Keywords: Education Minister/ B.C. Nagesh/ Text book/ Kuvempu/ insult