ಸಿದ್ದರಾಮಯ್ಯ ಮನವೊಲಿಸುವ ತೆವಲು ನನಗಿಲ್ಲ-ಸಚಿವ ಕೆ.ಎಸ್ ಈಶ್ವರಪ್ಪ…..

ಮೈಸೂರು,ಡಿಸೆಂಬರ್,29,2020(www.justkannada.in): ಕುರುಬ ಸಮುದಾಯವನ್ನ ಎಸ್‌ ಟಿಗೆ ಸೇರ್ಪಡೆ ಹೋರಾಟ ವಿಚಾರ ಸಂಬಂಧ, ಕುರುಬ ಸಮುದಾಯ ಇಬ್ಭಾಗ ಆಗಿಲ್ಲ. ಸಮಾಜದ ಬಹುತೇಕರು ಹೊರಾಟದಲ್ಲಿದ್ದಾರೆ. ಸಿದ್ದರಾಮಯ್ಯ ಮನವೊಲಿಸುವ ತೆವಲು ನನಗಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಕೈ ಜೋಡಿಸಿದ್ದೇವೆ. ಇದು ಹೋರಾಟ ಅಲ್ಲ, ಜನ ಜಾಗೃತಿ ಎಂದರು.

ದೇವರಾಜ ಅರಸು, ರಾಮಕೃಷ್ಣ ಹೆಗಡೆ ಕಾಲದಲ್ಲಿ ಕೇಂದ್ರಕ್ಕೆ ವರದಿ ಕಳುಹಿಸಿಲ್ಲ. ಈ ವಿಚಾರದಲ್ಲಿ ಸಾಕಷ್ಟು ರಾಜಕೀಯ ಒತ್ತಡ ಇತ್ತು ಎನ್ನುವ ಮಾತಿತ್ತು. ಗುರುಗಳು ಬಂದು ನಮ್ಮನ್ನು ಕೇಳಿಕೊಂಡಿದ್ದರು. ಈಶ್ವರಪ್ಪ, ರೇವಣ್ಣ, ಬಂಡೆಪ್ಪ ಕಾಶಂಪೂರ್ ಎಲ್ಲರೂ ಮನೆಗೆ ಬಂದು ಕೇಳಿದ್ದಾರೆ. ಹೀಗಾಗಿ ನಾನೂ ಜನ ಜಾಗೃತಿ ಕೆಲಸದಲ್ಲಿ ಧುಮುಕಿದ್ದೇನೆ. ಗುರುಗಳನ್ನು ದಾರಿ ತಪ್ಪಿಸುವ ಕೆಲಸ ಯಾರಿಂದಲೂ ಆಗಲ್ಲ. ಕುರುಬ ಸಮುದಾಯ ಇಬ್ಭಾಗ ಆಗಿಲ್ಲ. ಸಿದ್ದರಾಮಯ್ಯ ಮನವೊಲಿಸುವ ತೆವಲು ನನಗಿಲ್ಲ. ಸಮಾಜದ ಬಹುತೇಕರು ಹೊರಾಟದಲ್ಲಿದ್ದಾರೆ. ಯಾರಿಗೆ ಬೇಕು ಅವರು ಬರುತ್ತಾರೆ, ಇಲ್ಲ ಅಂದ್ರೆ ಇಲ್ಲ ಎಂದು ಸಿದ್ಧರಾಮಯ್ಯಗೆ  ಟಾಂಗ್ ನೀಡಿದರು.

ಉಪ ಸಭಾಪತಿ ಧರ್ಮೇಗೌಡರ ನಿಧನಕ್ಕೆ ಸಂತಾಪ…

ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆಗೆ ಬಿಜೆಪಿ ನಾಯಕ ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ. ಧರ್ಮೇಗೌಡರ ಮೃತ್ಯುಗೆ ಬಲಿಯಾದ ವಿಚಾರ ಕೇಳಿ ದಿಗ್ಭ್ರಮೆ ಆಗಿದೆ. ಇದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮೃದು ಸ್ವಭಾವ, ಎಲ್ಲರನ್ನೂ ಪ್ರೀತಿಯಿಂದ ಕಾಣುವ ವ್ಯಕ್ತಿ. ಅವರ ಕುಟುಂಬಕ್ಕೆ ಭಗವಂತ ನೋವು ಭರಿಸುವ ಶಕ್ತಿ ಕೊಡಲಿ ಎಂದರು.kuruba-community-siddaramaiah-not-convincing-minister-ks-eshwarappa-mysore

ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲದೆ ಸುಮ್ಮನೆ ವಿಶ್ಲೇಷಣೆ ಮಾಡಲ್ಲ. ಕುಮಾರಸ್ವಾಮಿ ಹೇಳಿಕೆ ಅವರ ಅಭಿಪ್ರಾಯ. ಸತ್ತ ವೇಳೆ ಇದರ ಬಗ್ಗೆ ವಿಶ್ಲೇಷಣೆ ಮಾಡಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: kuruba community- Siddaramaiah -not convincing-Minister- KS Eshwarappa-mysore