ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಹೇಗೆ? ಅವರ ತಂದೆ ಪ್ರಧಾನಿಯಾಗಿದ್ದು ಹೇಗೆ? : ಮಾಜಿ ಸಚಿವ ಆರ್.ಬಿ.ತಿಮ್ಮಾಪುರ

ಬೆಂಗಳೂರು,ಡಿಸೆಂಬರ್,06,2020(www.justkannada.in) : ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಹೇಗೆ? ಅವರ ತಂದೆ ಪ್ರಧಾನಿಯಾಗಿದ್ದು ಹೇಗೆ? ಎನ್ನುವುದನ್ನು ಅರಿತುಕೊಳ್ಳಲಿ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.logo-justkannada-mysoreದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಕಾಂಗ್ರೆಸ್ ಪಕ್ಷದ ನೆರವಿನಿಂದ ಅಧಿಕಾರ ಅನುಭವಿಸಿದವರು. ಬಿಜೆಪಿ ಜೊತೆ ಹೋಗಿ ಬಂದು ನಿಮಗೆ ರೂಢಿಯಿದೆ. ಆದರೆ, ಬಿಜೆಪಿ ಜೊತೆ ಹೋಗಿ ಬಂದ ನಂತರ ಏನಾಯ್ತು? ಅದನ್ನೂ ನೀವು ಬಹಿರಂಗಪಡಿಸಬೇಕು ಎಂದು ಸವಾಲೆಸೆದರು.

ಮೈತ್ರಿ ಸರ್ಕಾರದಲ್ಲಿ ನನಗೆ ಬಂದರು ಮತ್ತು ಒಳನಾಡು ಖಾತೆ ಸಿಕ್ಕಿತ್ತು. ಆದರೆ, ನೀವು ಎಐಸಿಸಿ ಮಾತು ಧಿಕ್ಕರಿಸಿ ಖಾತೆ ಬದಲಿಸಿದಿರಿ, ರೇವಣ್ಣ ಮಾತು ಕೇಳಿ ಖಾತೆಯನ್ನೇ ನೀಡಲಿಲ್ಲ ಎಂದು ಆರೋಪಿಸಿದರು.

 Kumaraswamy-Chief-Minister?-How-did-his-father-become-Prime-Minister?-Former-Minister-R.B.Thimmapura

ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತಾಡಬೇಡಿ. ಕಾಂಗ್ರೆಸ್ ಪಕ್ಷದ ಬಗ್ಗೆಯೂ ಮಾತನಾಡಬೇಡಿ ಎಂದು ಎಚ್.ಡಿ.ಕೆ ಗೆ ಆರ್.ಬಿ.ತಿಮ್ಮಾಪುರ ಕಿರಿಕಾರಿದ್ದಾರೆ.

key words : Kumaraswamy-Chief-Minister?-How-did-his-father-become-Prime-Minister?-Former-Minister-R.B.Thimmapura