ಚಾಲಕನ ನಿಯಂತ್ರಣ ತಪ್ಪಿ ಕಾಲುವೆ ಉರುಳಿದ ಕೆ.ಎಸ್ ಆರ್ ಟಿಸಿ ಬಸ್: ಓರ್ವ ಸಾವು: ಐವರಿಗೆ ಗಾಯ.

kannada t-shirts

ಚಾಮರಾಜನಗರ,ಮಾರ್ಚ್,14,2022(www.justkannada.in): ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್ ಟಿಸಿ ಬಸ್ ಕಾಲುವೆಗೆ ಉರುಳಿ ಓರ್ವ ಪ್ರಯಾಣಿಕ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕುಡುವಾಳೆ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.  ಕೊಳ್ಳೇಗಾಲದಿಂದ ಪಿ.ಜಿ.ಪಾಳ್ಯಕ್ಕೆ ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.  ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಐದು ಮಂದಿ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.tractor-collision-bike-bike-rider-dies-on-the-spot-mysore

ಕಾಲುವೆಯಲ್ಲಿನ ನೀರಿಗೆ ಬಸ್ ಬಿದ್ದ ಕಾರಣ ಸದ್ಯ ಸ್ಥಳೀಯರು ಪ್ರಯಾಣಿಕರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ.

Key words: KSRTC-bus – canal-death

website developers in mysore