ಇಂದಿನಿಂದ  KSRTC ಅಂಬಾರಿ ಉತ್ಸವ ಬಸ್ ಸೇವೆ: ಎಲ್ಲಿಲ್ಲಿ ಸಂಚರಿಸುತ್ತೆ ಬಸ್..?

ಬೆಂಗಳೂರು,ಫೆಬ್ರವರಿ,24,2023(www.justkannada.in): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಇಂದಿನಿಂದ ನೂತನ ಅಂಬಾರಿ ಉತ್ಸವ  ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳನ್ನು  ನಾಳೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.

ಬಸ್ಸುಗಳು ಹೊರಡುವ ಮಾರ್ಗ, ಹೊರಡುವ  ಬಸ್ ನಿಲ್ದಾಣ, ಹೊರಡುವ ಸಮಯ ಈವರೆಗೂ ಮುಂಗಡ ಕಾಯ್ದಿರಿಸಿರುವ ಆಸನಗಳ ವಿವರ ಈ‌ ಕೆಳಕಂಡಂತಿದೆ‌.

1.ಬೆಂಗಳೂರು-ಹೈದರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 22:15  ಬುಕ್ಕಿಂಗ್ ಸಂಖ್ಯೆ – 15 ಸೀಟುಗಳು

2.ಬೆಂಗಳೂರು-ಹೈಟೆಕ್ ಸಿಟಿ, ಕೆಂಪೇಗೌಡ ಬಸ್ ನಿಲ್ದಾಣ, 20:15 ಬುಕ್ಕಿಂಗ್  ಸಂಖ್ಯೆ- 21 ಸೀಟುಗಳು

3.ಬೆಂಗಳೂರು-ಸಿಕಂದ್ರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 21:00  ಬುಕ್ಕಿಂಗ್ ಸಂಖ್ಯೆ -22 ಸೀಟುಗಳು

4.ಬೆಂಗಳೂರು-ಪಣಜಿ,  ಕೆಂಪೇಗೌಡ ಬಸ್ ನಿಲ್ದಾಣ, 19:28  ಬುಕ್ಕಿಂಗ್ ಸಂಖ್ಯೆ – 14 ಸೀಟುಗಳು

5.ಬೆಂಗಳೂರು-ತ್ರಿಶೂರ, ಶಾಂತಿನಗರ ಬಸ್ ನಿಲ್ದಾಣ, 21:30  ಬುಕ್ಕಿಂಗ್ ಸಂಖ್ಯೆ -35 ಸೀಟುಗಳು

  1. ಬೆಂಗಳೂರು-ಎರ್ನಾಕುಲಂ, ಶಾಂತಿನಗರ ಬಸ್ ನಿಲ್ದಾಣ, 20:15 ಬುಕ್ಕಿಂಗ್ ಸಂಖ್ಯೆ – 33 ಸೀಟುಗಳು

7.ಬೆಂಗಳೂರು-ತಿರುವನಂತಪುರ, ಶಾಂತಿನಗರ ಬಸ್ ನಿಲ್ದಾಣ, 16:13 ಬುಕ್ಕಿಂಗ್ ಸಂಖ್ಯೆ -25  ಸೀಟುಗಳು

ಸಾರ್ವಜನಿಕ ಪ್ರಯಾಣಿಕರು ಮೇಲ್ಕಂಡ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಈ ನೂತನ ಅಂಬಾರಿ ಉತ್ಸವ ಬಸ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೆಎಸ್ ಆರ್ ಟಿಸಿ ಮನವಿ ಮಾಡಿದೆ.

Key words: KSRTC -Ambari Utsav- bus- Service