ಕೆಎಸ್ಒಯು ಅಕ್ರಮ : ಕ್ರಮ ಕೈಗೊಂಡು ಮಾಹಿತಿ ನೀಡಲು ಹೈಯರ್ ಎಜುಕೇಷನ್ ಸೆಕ್ರೆಟರಿಗೆ ಸೂಚಿಸಿದ ಸಿಎಂ.

 

ಮೈಸೂರು, ಅಕ್ಟೋಬರ್ 08, 2021 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿನ ಅಕ್ರಮಗಳ ಬಗ್ಗೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಸಲ್ಲಿಸಿದ್ದ ದೂರರ್ಜಿಗೆ ಮುಖ್ಯಮಂತ್ರಿ ಸ್ಪಂಧಿಸಿದ್ದಾರೆ.

ಅಕ್ರಮ ನೇಮಕಾತಿ ಆರೋಪದಡಿ ಮುಕ್ತ ವಿವಿ ಕುಲಪತಿ, ಕುಲಸಚಿವ, ಹಣಕಾಸು ಅಧಿಕಾರಿ ವಿರುದ್ಧ ಎಸಿಬಿಗೆ ದೂರು ನೀಡಲು ಅನುಮತಿ ಕೋರಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಸ್ಪಂಧಿಸಿರುವ ಮುಖ್ಯಮಂತ್ರಿಗಳು, ದೂರಿಗೆ ಸಂಬಂಧಿಸಿದಂತೆ ಕಾನೂನು ರೀತಿ ಸೂಕ್ತ ಪರಿಶೀಲನೆ ನಡೆಸಿ ಕೂಡಲೇ ವರದಿಯನ್ನು ಕಚೇರಿ ಗಮನಕ್ಕೆ ತರುವಂತೆ, ಉನ್ನತ ಶಿಕ್ಷಣ ಇಲಾಖೆಯ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಅವರು ಸಲ್ಲಿಸಿದ್ದ ಸಮಗ್ರ ದಾಖಲೆಗಳನ್ನು ಸಿಎಂಒ ಕಚೇರಿಯಿಂದ ಪಾರ್ವಡ್ ಮಾಡಲಾಗಿದೆ. ಜತೆಗೆ ಈ ದೂರಿನ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.

ಏನಿದು ದೂರು :

ಕಾನೂನು ಬಾಹಿರವಾಗಿ 7 ತಿಂಗಳಿಂದ ಮುಕ್ತ ವಿಶ್ವವಿದ್ಯಾಲಯದಲ್ಲಿ 90ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಸರ್ಕಾರದ ಆದೇಶದಂತೆ ತಾತ್ಕಾಲಿಕ ಹಾಗೂ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ಈI ಬಿಡುಗಡೆಗೊಳಿಸಲು ಕ್ರಮ ವಹಿಸಿಲ್ಲ ಎಂದು ಕೆ.ಎಸ್.ಶಿವರಾಮು ಆರೋಪಿಸಿದ್ದರು.

ನ್ಯಾ. ‘ಕೆ.ಭಕ್ತವತ್ಸಲ ಸತ್ಯಶೋಧನಾ ಸಮಿತಿ ವರದಿಯಂತೆ ರಾಜ್ಯಪಾಲರು ಹೊರಡಿಸಿರುವ ಆದೇಶವನ್ನು ವಿಶ್ವವಿದ್ಯಾಲಯ ಉಲ್ಲಂಘಿಸಿದೆ. ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್, ಕುಲಸಚಿವ, ಹಣಕಾಸು ಅಧಿಕಾರಿ ವಿರುದ್ಧ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲು ಅನುಮತಿ ನೀಡುಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದರು.

ಈ ಕುರಿತು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕೆಎಸ್ ಶಿವರಾಮು, ನೇಮಕಾತಿ ಮಾಡಿಕೊಂಡಿರುವವ ಹೆಸರು, ಹುದ್ದೆಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ದೂರು ನೀಡಲು ಅನುಮತಿ ನೀಡುವಂತೆ ಕೋರಿದ್ದರು.

 

key words: KSOU appointments- illegal allegations- letter to governor against VC-cm-order-for-enquiry