“ಕೆಸೆಟ್ ಪರೀಕ್ಷೆ, 5,495 ಮಂದಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್…

ಮೈಸೂರು,ಜನವರಿ,08,2021(www.justkannada.in) : ಮೈಸೂರು ವಿವಿ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೇಂದ್ರವು ನಡೆಸಿದ 2020ರ ಕೆಸೆಟ್ ಪರೀಕ್ಷೆಯಲ್ಲಿ 3113 ಪುರುಷ ಅಭ್ಯರ್ಥಿಗಳು ಹಾಗೂ 2382 ಮಹಿಳಾ ಅಭ್ಯರ್ಥಿ ಸೇರಿದಂತೆ ಒಟ್ಟು 5,495 ಮಂದಿ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jk-logo-justkannada-mysoreಶುಕ್ರವಾರ ಕ್ರಾಫರ್ಡ್ ಭವನದ ಅಕಾಡೆಮಿಕ್ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಕುಲಪತಿಗಳು ಮಾಹಿತಿ ನೀಡಿದರು.

ಕೆಸೆಟ್ ಪರೀಕ್ಷೆಗೆ 1,06,396 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರು. ಅದರಲ್ಲಿ 79,717ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 5,495 ಮಂದಿ ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದು, ಇವರು ಕರ್ನಾಟಕ ರಾಜ್ಯ ವಿವಿಗಳು ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರಾಗಿರುತ್ತಾರೆ ಎಂದರು.

kset-test-5,495-become-assistant-professor-Eligibility-Chancellor-Prof G.Hemant Kumar ...ಮೈಸೂರು ವಿವಿ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ

ಅರ್ಹರಾದವರಿಗೆ ಮೈಸೂರು ವಿಶ್ವವಿದ್ಯಾನಿಲಯ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೇಂದ್ರದಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ಪ್ರಮಾಣಪತ್ರವು ಜೀವಿತಾವಧಿಯ ಸಿಂಧುತ್ವವನ್ನು ಹೊಂದಿರುತ್ತದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಮೈಸೂರು ವಿವಿ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು ಎಂದು ತಿಳಿಸಿದರು. kset-test-5,495-become-assistant-professor-Eligibility-Chancellor-Prof G.Hemant Kumar ...ಸುದ್ದಿಗೋಷ್ಟಿಯಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೇಂದ್ರದ ಸಂಯೋಜಕ ಪ್ರೊ.ಎಚ್.ರಾಜಶೇಖರ್ ಹಾಜರಿದ್ದರು.

ENGLISH SUMMRAY….

KSET Exams – 5,595 candidates eligible to become Assistant Prof.s: MoU VC
Mysuru, Jan. 08, 2021 (www.justkannada.in): A total number of 5,495 candidates including 3113 men and 2382 women have gained eligibility to become Assistant Professors, by passing the Karnataka State Eligibility Test (KSET) for Assistant Professorship, conducted by the University of Mysore.
Addressing a press meet held at the Academic Council auditorium in the Crawford Hall today, Prof. G. Hemanth Kumar, Vice-Chancellor, University of Mysore provided the information. He explained that a total number of 1,06,396 candidates had applied for KSET exams and 79717 of them attended the exams. Out of them 5495 candidates have become eligible to become Assistant Professors in only Karnataka State Universities and First Grade Colleges.kset-test-5,495-become-assistant-professor-Eligibility-Chancellor-Prof G.Hemant Kumar ...
“Certificates will be distributed to all the eligible candidates, from the Karnataka State Eligibility Test (KSET) for Assistant Professorship, University of Mysore. This certificate will be valid for the entire lifetime,” he explained.
Keywords: Prof. G. Hemanth Kumar/ Karnataka State Eligibility Test (KSET) for Assistant Professorship/ KSET

key words :  kset-test-5,495-become-assistant-professor-Eligibility-Chancellor-Prof G.Hemant Kumar …