ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಕೆ.ಎಸ್ ಈಶ್ವರಪ್ಪ  ದೂರು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್  ಕಿಡಿ.

ಮೈಸೂರು,ಏಪ್ರಿಲ್,7,2023(www.justkannada.in):  ಮಾಜಿ ಸಿಎಂ  ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್  ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಕರ್ನಾಟಕದಲ್ಲಿ ಚುನಾವಣೆ  ಸಂಹಿತೆ ಮಾರ್ಚ್ 29 ರಂದು  ಜಾರಿಗೆ ಬಂದಿದೆ‌. ಕರ್ನಾಟಕ ಅಸೆಂಬ್ಲಿ ಚುನಾವಣೆ ಮಾಹಿತಿ ನೀಡಿದ್ದಾರೆ. ಮತದಾರರ ಮೇಲೆ ಸರಿಯಾಗಿ ಪ್ರಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಬಿಳುಗಲಿ ಕಾರ್ಯಕ್ರಮದಲ್ಲಿ ಗ್ರಾಮದ ಜನರು ಹಣವನ್ನು ಸಂಗ್ರಹಿಸಿ, ಅಂಬೇಡ್ಕರ್ ಪುತ್ಥಳಿ ಮಾಡಿದ್ದರು. 1 ಗಂಟೆಗೆ ನೀತಿ ಸಂಹಿತೆ ಜಾರಿಗೆ ಬಂದಿದ್ದು, 1.10ಗಂಟೆಗೆ ಆಗ ವಾಲಗದವರಿಗೆ 1ಸಾವಿರ ರೂ ನೀಡಿದ್ದಾರೆ, ಅವರ ಮೇಲೆ ಎಫ್ ಐಆರ್ ಆಗಿದೆ. ವಾಲಗದವರು ಅ ಕ್ಷೇತ್ರದ ಮತದಾರರಲ್ಲ. ಅ ಕಾರ್ಯಕ್ರಮದಲ್ಲಿ ಬಿಜೆಪಿ ವೈಪಲ್ಯಗಳ ಮಾತನಾಡಿದ್ದಾರೆ. ಈಶ್ವರಪ್ಪ ವಿರುದ್ಧ ಕಂಟ್ರಾಕ್ಟರ್ ಮೂಲಕ ಹಣವನ್ನು  ಪಡೆದರು. ಕಂಟ್ರಾಕ್ಟರ್ ಸಂತೋಷ್ ಸುಸೈಡ್ ಮಾಡಿಕೊಳ್ಳುತ್ತಾನೆ. ಗುತ್ತಿಗೆದಾರನ ಮೂಲಕ 40ಪರ್ಸೆಂಟ್  ಕಮೀಷನ್ ಹಾಕಿದ್ದರು. ಅಲ್ಲದೆ ಈಶ್ವರಪ್ಪ ಅವರನ್ನು ಸಿದ್ಧರಾಮಯ್ಯ ಅವರು ದಡ್ಡ ಎಂದಿದ್ದಕ್ಕೆ, ಅದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಚುನಾವಣೆ ಅಧಿಕಾರಿಗೆ ಪತ್ರವನ್ನು ಬರೆಯುತ್ತಾರೆ.

ವರಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಅವರು ದೂರು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಗ್ಗೆ ಅಕ್ಷೇಪ ಇಲ್ಲ. ಒತ್ತಡ ಇದೆ. ಎಫ್ ಐ ಆರ್ ಹಾಕಿದ್ದಾರೆ ಸ್ವಾಗತಿಸುತ್ತೇವೆ. 24ಗಂಟೆಯ ಒಳಗೆ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗ ಅವರ ಕೆಲಸವನ್ನು ಮಾಡುತ್ತಿದ್ದಾರೆ.  ಅವರು 24 ಗಂಟೆಗೆ ಒಳಗೆ ಕೆಲಸ ಮಾಡಿದ್ದಾರೆ. ಆದರೆ ನಾವು ದೂರು ಕೊಟ್ಟರೆ ಕ್ರಮವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇರೆ ದೇಶದ ವಂಶ ಕಾಂಗ್ರೆಸ್, ಭಾರತೀಯರ ವಂಶ ಉದ್ದಾರವಾಗಬೇಕಾದರೆ  ಬಿಜೆಪಿ ಮತ ನೀಡಿ ಎಂಬ ಶೃತಿ ಹೇಳಿಕೆ ಕುರಿತು ಮಾತನಾಡಿದ ಎಂ.ಲಕ್ಷ್ಮಣ್ , ಸ್ಮೃ ತಿ ಇರಾನಿ ವಂಶಸ್ಥರೇ ಸ್ಪಷ್ಟಪಡಿಸಿ, ಈ ಬಗ್ಗೆ ಚುನಾವಣೆ ಆಯೋಗ ನೋಟೀಸ್ ನೀಡಿಲ್ಲ ಉತ್ತರ ಕೊಡಬೇಕು. ನಾವು ಇವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ.ಎಫ್ ಐಆರ್ ಮಾಡಬೇಕು. ಈ ಬಗ್ಗೆ ಕೇಸ್ ದಾಖಲು ಮಾಡದಿರುವುದು, ಇದು ರಾಜ್ಯದ, ದೇಶದ ದುರಂತ ಎಂದು ಕಿಡಿಕಾರಿದರು.

ಹೊಸ ಯೋಜನೆ ಮಾಡಿದ್ದಾರೆ, 80 ವರ್ಷ ಮೇಲ್ಪಟ್ಟು,೭ ೦ವರ್ಷ ಮೇಲ್ಪಟ್ಟು ಕುಂತಲ್ಲೆ ಮತದಾನ ಮಾಡಬಹುದು.ಅವರ ಮನೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇದು ಒಂದು ತರಹ ಮಾಲ್ ಪ್ರಾಕ್ಟೀಸ್ ತರಹ, ಮತದಾರರು ಬುಕ್ ಮಾಡುವ ಕೆಲಸವನ್ನು ಮಾಡುತ್ತಿದ್ದೀರಿ. ಇದನ್ನು ಕ್ಯಾನ್ಸಲ್ ಮಾಡಿ ಎಂದು ಆಗ್ರಹಿಸಿದರು.

ಕೋ ಅಪರೇಟಿವ್ ಬ್ಯಾಂಕ್ ಗಳನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದೀರಿ, ನಾಳೆ ನಾಳಿದ್ದು ಲೋನ್ ನೀಡುವುದರ ಮತದಾರರಿಗೆ ಅಮಿಷಾವೊಡ್ಡುತ್ತಿದ್ದಾರೆ.ಇದನ್ನು ಚುನಾವಣಾ ಮುಗಿಯವರರೆಗೂ ಯಾರಿಗೂ ಸಾಲ ನೀಡಬಾರದು.

ಸೆಲೆಬ್ರಿಟಿಗಳನ್ನು ಕರೆದುಕೊಂಡು ಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಬಿಗ್ ಬಾಸ್, ಕಿರುತೆರೆ ,ಜಾಹೀರಾತು, ಚಿತ್ರವನ್ನು ಚುನಾವಣಾ ಮುಗಿಯವರೆಗೂ ಬ್ಯಾನ್ ಮಾಡಬೇಕು ಎಂದು ಎಂ.ಲಕ್ಷ್ಮಣ್ ಒತ್ತಾಯಿಸಿದರು.

2023ರಂದು ಮಹಾವೀರ,ಅಕ್ಕಮಹಾದೇವಿ, ಬಸವಣ್ಣ, ಭಗಿರಥ ಶಂಕರಾ ಚಾರ್ಯ,ಹೇಮರೆಡ್ಡಿ ಮಲ್ಲಪ್ಪ ಅಚರಣೆ ಮಾಡಬಹುದು ಎಂದು ಹೇಳಿದೆ  ಆದೇಶ ಮಾಡಿದ್ದಾರೆ. ಏಪ್ರಿಲ್ ೧೪ ರಂದು ಅಂಬೇಡ್ಕರ್ ಜಯಂತಿ ನಿಷೇಧಿಸಿದ್ದೀರಾ,ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕು ಎಂದು ಕೂಡಲೇ ಆಗ್ರಹಿಸುತ್ತೇವೆ ಎಂದರು.

ಕೆಎಂ ಎಫ್ ಅನ್ನು ಅಮುಲ್ ಜೊತೆಯಲ್ಲಿ ವಿಲೀನ ಮಾಡುತ್ತಿದ್ದಾರೆ. ನಂದಿನಿಯನ್ನು ಅಮುಲ್ ಜೊತೆಯಲ್ಲಿ ವಿಲೀನ ಮಾಡುತ್ತಿದ್ದಾರೆ. ಬಿಜೆಪಿ ಮಾಡಲ್ಲ ಮಾಡುತ್ತಾರೆ, ಮಾಡ್ತೀವಿ ಅಂದರೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಗ್ಯಾರಂಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ನಿರ್ಮಲಾ ಸೀತಾರಾಮನ್ ಗ್ಯಾರಂಟಿ ಯೋಜನೆಗೆ  ೧ಲಕ್ಷ ಕೋಟಿ ಬೇಕು ಎಂದಿದ್ದಾರೆ.  ಹಸಿ ಸುಳ್ಳು ಹೇಳುತ್ತಿದ್ದೀರಿ ಎಂದು ಕಿಡಿಕಾರಿದರು.

Key words: KS Eshwarappa- complains – Election Commission- against- Siddaramaiah- KPCC spokesperson- M. Laxman