ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಗೆ ನಾಳೆ ಸಿಎಂ ಬಿಎಸ್ ವೈ ಬಾಗಿನ ಸಮರ್ಪಣೆ: ವೇಳಾಪಟ್ಟಿ ಹೀಗಿದೆ…

ಮೈಸೂರು,ಆಗಸ್ಟ್,20,2020(www.justkannada.in):  ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಕೆ.ಆರ್ ಎಸ್ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿದ್ದು ಎರಡೂ ಜಲಾಶಯಗಳಿಗೆ ನಾಳೆ  ಸಿಎಂ ಬಿಎಸ್ ಯಡಿಯೂರಪ್ಪ ಬಾಗಿನ ಸಮರ್ಪಣೆ ಮಾಡಲಿದ್ದಾರೆ.jk-logo-justkannada-logo

ಬಾಗಿನ ಸಮರ್ಪಣೆಗೆ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಆಗಮಿಸುವ ಹಿನ್ನೆಲೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿದ ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರು ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ 11.50ಕ್ಕೆ  ಕೆಆರ್ ಎಸ್ ಗೆ ಹೆಲಿಕಾಪ್ಟರ್ ಮೂಲಕ ಸಿಎಂ ಬಿಎಸ್ ವೈ ಬರಲಿದ್ದು, ಮಧ್ಯಾಹ್ನ 12.05 ಕ್ಕೆ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಿಸಿದ ಬಳಿಕ ಸಿಎಂ  ಬಿಎಸ್ ಯಡಿಯೂರಪ್ಪ ಕಾವೇರಿ ಮಾತೆಗೆ ಪೂಜೆ ಸಲ್ಲಿಕೆ ಮಾಡಲಿದ್ದಾರೆ.krs-kabini-dam-cm-bs-yeddyurappa-bagina-worship

ಕೆಆರ್ ಎಸ್ ಬಳಿಕ ಮಧ್ಯಾಹ್ನ 1.15 ಕ್ಕೆ ಕಬಿನಿ ಜಲಾಶಯಕ್ಕೆ ಸಿಎಂ ಬಿಎಸ್ ವೈ ಬಾಗಿನ ಸಮರ್ಪಣೆ ಮಾಡಲಿದ್ದು, ಜಲಾಶಯಗಳ ಬಾಗಿನ ಸಮರ್ಪಣೆಯ ಬಳಿಕ ಪೂರ್ವ ನಿಗದಿಯಂತೆ ಮಧ್ಯಾಹ್ನ 1.40 ಕ್ಕೆ ಬೆಂಗಳೂರಿಗೆ ಪಯಣ ಬೆಳಸಲಿದ್ದಾರೆ.

Key words: KRS –kabini-dam- CM bs yeddyurappa-bagina-worship