“ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ವಿಶ್ವ ಕಿಡ್ನಿ ದಿನಾಚರಣೆ”

kannada t-shirts

ಮೈಸೂರು,ಮಾರ್ಚ್,20,2021(www.justkannada.in) : ಸರ್ಕಾರಿ ಕಾರ್ಯಕ್ರಮಗಳಾದ ಆರೋಗ್ಯ ಕರ್ನಾಟಕ ಮತ್ತು ಇತರೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಿರಿ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಜೆ.ಬಿ.ನರೇಂದ್ರ ಹೇಳಿದರು.jkಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ನೆಪ್ಪೋಯುರಾಲಜಿ ಘಟಕ, ನೆಯುರಾಲಜಿ ಸಂಸ್ಥೆ ಮೈಸೂರು ಘಟಕದ ವತಿಯಿಂದ ವಿಶ್ವ ಕಿಡ್ನಿ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು, ಸಂಸ್ಥೆಯು ಇದುವರವಿಗೂ 328 ರೋಗಿಗಳಿಗೆ ಮೇಜರ್ ಆಪರೇಷನ್ ಮಾಡಿದ್ದು, 716 ರೋಗಿಗಳಿಗೆ ಮೈನರ್ ಆಪರೇಷನ್ ಮಾಡಲಾಗಿದೆ.  17,040 ಜನರಿಗೆ ಡಯಾಲಿಸಿಸ್‌ ಮಾಡಲಾಗಿದೆ, 24,173 ಜನ ಹೊರರೋಗಿಗಳಾಗಿ ಮತ್ತು 1392 ಜನರು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಮನೋವೈದ್ಯ ಡಾ.ಜಿ.ಶಿವಾನಂದ ಮನೋಹರ್ ಮಾತನಾಡಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಮಾನಸಿಕ ಸೈರ್ಯವನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಂಡು ದೀರ್ಘಕಾಲ ಬದುಕಬಹುದೆಂದು ತಿಳಿಸಿದರು,

ಆಹಾರ ತಜ್ಞ ಸಿದ್ದರಾಜು ಮಾತನಾಡಿ, ಕಿಡ್ನಿ ರೋಗಿಗಳು ಪ್ರತಿದಿನ ಯಾವ,ಯಾವ ಆಹಾರವನ್ನು ತೆಗೆದುಕೊಂಡರೆ ಸಾಮಾನ್ಯರಂತೆ ಜೀವನ ಸಾಗಿಸಬಹುದೆಂದು ತಿಳಿಸಿದರು.

ಡಾ.ಅನಿಕೇತ್ ಪ್ರಭಾಕರ್ ಮಾತನಾಡಿ, ಡಯಾಲಿಸಿಸ್ ರೋಗಿಗಳಿಗೆ ಪೂರ್ವದಲ್ಲಿ ಮತ್ತು ಮುಂದಿನ ದಿನಗಳಲ್ಲಿ ಡಯಾಲಿಸಿಸ್ ಪಡೆದುಕೊಳ್ಳಲು ಆನುಸರಿಸಬೇಕಾದ ಕ್ರಮದ ಬಗ್ಗೆ ಹೇಳಿದರು.

ಕಾರ್ಯಕ್ರಮವನ್ನು ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಂಜುಂಡಸ್ವಾಮಿ ಉದ್ಘಾಟಿಸಿದರು.

ಮೈಸೂರಿನ ಇಂಟಿಮೇಟ್ ದಿಯೇಟರ್ ಕಲಾವಿದರಿಂದ ಕಿಡ್ನಿ ಕಸಿ ಬಗ್ಗೆ ಜಾಗೃತಿ ಮೂಡಿಸುವ ಕಿರುನಾಟಕ ಪ್ರದರ್ಶಿಸಲಾಯಿತು.

ನೆಪ್ಪೋಯುರಾಲಜಿ ಘಟಕದ ಮುಖ್ಯಸ್ಥರಾದ ಡಾ.ಎಸ್.ಹಿಮಮಣಿ, ನಿರ್ದೇಶಕ ಡಾ.ಆರ್.ಕೇಶವಮೂರ್ತಿ, ಡಾ.ಸುನೀತ, ಡಾ.ಪ್ರಕಾಶ್‌ಪ್ರಭು, ಡಾ.ಡೇವಿಯರ್ ಡಿಸೋಜ ಉಪಸ್ಥಿತರಿದ್ದರು.

key words : KR’s Hospital-premises-World-Kidney-Day

website developers in mysore