ಪುರಸಭೆ ಚುನಾವಣೆ: ಟಿಕೆಟ್ ಗಾಗಿ ಸಚಿವರ ಹಿಂದೆ ದುಂಬಾಲು ಬಿದ್ದ ಆಕಾಂಕ್ಷಿಗಳು….

Promotion

ಮೈಸೂರು,ಮೇ,14,2019(www.justkannada.in): ಕೆ.ಆರ್ ನಗರ ಪುರಸಭೆ ಚುನಾವಣೆಗೆ ‌ಹಿನ್ನಲೆ, ಟಿಕೆಟ್ ಗಾಗಿ ಆಕಾಂಕ್ಷಿಗಳು ಸಚಿವ ಸಾರಾ ಮಹೇಶ್ ಹಿಂದೆ ದುಂಬಾಲು ಬಿದ್ದಿದ್ದಾರೆ.

ಕೆ.ಆರ್ ನಗರ ಪುರಸಭೆ ಚುನಾವಣೆಗೆ ನಾಳಿದ್ದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಹೀಗಾಗಿ ಭಿಪಾಮ್ ಗಾಗಿ ಸಚಿವ ಸಾರಾ ಮಹೇಶ್ ಕಚೇರಿ ಮುಂದೆ ಟಿಕೆಟ್ ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದಾರೆ. ಕೆ.ಆರ್.ನಗರ ಪುರಸಭೆ ಚುನಾವಣೆಗೆ ಸಚಿವ ಸಾರಾ ಮಹೇಶ್ ಮೈಸೂರಿನಲ್ಲೆ ಸಭೆ ನಡೆಸುತ್ತಿದ್ದಾರೆ.

ಮೈಸೂರಿನ ಮರಿಮಲ್ಲಪ್ಪ ರಸ್ತೆಯಲ್ಲಿ ಇರುವ ಸಚಿವ ಸಾ.ರಾ.ಮಹೇಶ್ ಆಫೀಸ್ ಮುಂದೆ  ಟಿಕೆಟ್ ಗಾಗಿ ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದಾರೆ.

Key words: KR Nagar-Municipal -elections-minister-aspirations – ticket