ಕೆ.ಆರ್.ಕ್ಷೇತ್ರ ಶೂನ್ಯ ಕೊರೋನಾ ಪ್ರಕರಣ ಕ್ಷೇತ್ರವನ್ನಾಗಿ ಮಾಡಲು ಪಣ- ಶಾಸಕ ಎಸ್.ಎ ರಾಮದಾಸ್….

ಮೈಸೂರು,ಆ,7,2020(www.justkannada.in): ಕೆ.ಆರ್ ಕ್ಷೇತ್ರವನ್ನ ಶೂನ್ಯ ಕೊರೋನಾ ಪ್ರಕರಣ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.jk-logo-justkannada-logo

ಶಾಸಕ ರಾಮದಾಸ್ ಅವರ ಕಂಟೈನ್ಮೆಂಟ್ ಪ್ರದೇಶಗಳಿಗೆ ಭೇಟಿ ಮುಂದುವರೆದಿದ್ದು ಇಂದು ಕೂಡ  ಕಂಟೈನ್ಮೆಂಟ್ ಭಾಗದ ಮನೆಗಳಿಗೆ ಭೇಟಿ ನೀಡಿ ನಿವಾಸಿಗಳ ಆರೋಗ್ಯ ವಿಚಾರಣೆ ಮಾಡಿದರು. ವಾರ್ಡ್ ನಂ 43, 47 ಮತ್ತು 56 ರ ಕುವೆಂಪು ನಗರ, ಟಿ. ಕೆ. ಲೇಔಟ್ ಮತ್ತು ಕೃಷ್ಣಮೂರ್ತಿಪುರಂನ  ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಅಗತ್ಯ ವಸ್ತುಗಳ ವ್ಯವಸ್ಥೆ  ಮಾಡಿದರು.

ಸೋಂಕಿತರ ಕುಟುಂಬಸ್ಥರಿಗೆ ಆರೋಗ್ಯ ಕಿಟ್, ಸ್ಯಾನಿಟೈಜರ್, ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನ ಶಾಸಕ ಎಸ್.ಎ ರಾಮದಾಸ್ ವಿತರಣೆ ಮಾಡಿದರು.  ಕಂಟೈನ್ಮೆಂಟ್ ಭಾಗದ ಪ್ರದೇಶಗಳಲ್ಲಿ ಕೋವಿಡ್ 19 ಮಾಹಿತಿ ಒಳಗೊಂಡ ಮಾಹಿತಿ ಫಲಕ ಅಳವಡಿಸುವುದರ ಜೊತೆಗೆ ಸ್ಥಳೀಯ ನಿವಾಸಿಗಳ ಕುಂದು ಕೊರತೆಯನ್ನ ಶಾಸಕ ರಾಮದಾಸ್ ಆಲಿಸಿದರು. ಶಾಸಕ ರಾಮದಾಸ್ ಗೆ ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಾಥ್ ನೀಡಿದರು.

ಕಂಟೇನ್ ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಕೆ.ಆರ್.ಕ್ಷೇತ್ರವನ್ನು ಶೂನ್ಯ ಕೊರೋನಾ ಪ್ರಕರಣ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ. ನಾವು ಹೇಳಿದಂತೆ ಕೊರೋನಾ ಪ್ರಕರಣವನ್ನ ತಡೆಯಲು ಸಾಧ್ಯವಾಗದಿದ್ದರೂ ಅದರ ಅಟ್ಟಹಾಸವನ್ನು ನಿಯಂತ್ರಿಸುತ್ತಿದ್ದೇವೆ ಎಂದು ಹೇಳಿದರು.kr-constituency-zero-corona-case-mla-sa-ramadas

ಇಲ್ಲಿಯವರೆಗೂ ಕೆ.ಆರ್.ಕ್ಷೇತ್ರದಲ್ಲಿ ಕೊರೊನಾದಿಂದ ಮೂರು ಜನ ಸಾವನ್ನಪ್ಪಿದ್ದಾರೆ. ಇದನ್ನು ತಡೆಯಲು ವೈದ್ಯಾಧಿಕಾರಿಗಳು ಹಾಗೂ ಟಾಸ್ಕ್ ಫೋರ್ಸ್ ಅಧಿಕಾರಿಗಳ ಜೊತೆಗೂಡಿ ಕೊರೊನಾ ರಿಸ್ಕ್ ಕೇಸ್ ಗಳ ಕಡೆ ವಿಶೇಷ ಗಮನ ಹರಿಸಲಾಗುತ್ತಿದೆ. ಹೈರಿಸ್ಕ್ ಕೇಸ್ ಗಳ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 15 ವಾರ್ಡ್ ಗಳಿಗೆ ಭೇಟಿ ನೀಡಿ ರೋಗ ನಿರೋಧಕ ಕಿಟ್ ನೀಡಲಾಗಿದೆ. ಹಿರಿಯರು ಮತ್ತು ಮಕ್ಕಳು ಅನಗತ್ಯವಾಗಿ ಓಡಾಡಬೇಡಿ ಎಂದು ಶಾಸಕ ಎಸ್.ಎ ರಾಮದಾಸ್ ಮನವಿ ಮಾಡಿದರು.

Key words: KR constituency- zero- corona -case –MLA- SA Ramadas.