ಖಾಲಿ ತೆಂಗಿನ ಚಿಪ್ಪು ಪ್ರದರ್ಶಿಸಿ ರಾಜ್ಯ ಬಜೆಟ್ ಟೀಕಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್..

ಮೈಸೂರು,ಮಾರ್ಚ್,9,2021(www.justkannada.in): ನಾನೇ ಚಾಲೆಂಜ್ ಮಾಡಿದ್ದೆ, ಮೈಸೂರಿಗೆ ಈ ಬಾರಿ ಬಜೆಟ್ ನಲ್ಲಿ 100ಕೋಟಿ ತೆಗೆದುಕೊಂಡು ಬರಲಿ ಸಾಕು ಎಂದಿದ್ದೆ. ಆದರೆ ಬಜೆಟ್ ನಲ್ಲಿ ಒಂದು ನಯಾಪೈಸೆ ಮೈಸೂರಿಗೆ ಸಿಕ್ಕಿಲ್ಲ. ರಾಜ್ಯ ಬಜೆಟ್ ನಲ್ಲಿ ಮೈಸೂರಿಗೆ ಚಿಪ್ಪು ಸಿಕ್ಕಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯವಾಡಿದರು.jk

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಖಾಲಿ ತೆಂಗಿನ ಚಿಪ್ಪು ಪ್ರದರ್ಶಿಸಿ ರಾಜ್ಯ ಸರ್ಕಾರ ಬಜೆಟ್ ಕುರಿತು  ವಿಡಂಬನೆ ಮಾಡಿದರು.

ಮೈಸೂರಿನಲ್ಲಿ ಕಳೆದ ಹತ್ತು ಹದಿನೈದು ದಿನಗಳಿಂದ ನಿರಂತರವಾಗಿ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಸಂಘ ಸಂಸ್ಥೆಗಳು ಈ ಭಾಗಕ್ಕೆ ಏನು ಬೇಕೆಂದು  ಚರ್ಚೆ ಮಾಡಲಾಗಿತ್ತು. ಅದರಂತೆ 17 ಬೇಡಿಕೆಗಳನ್ನು ಇಡಲಾಗಿತ್ತು. ಅದರಲ್ಲಿ ಮೈಸೂರಿಗೆ ಪ್ರತ್ಯೇಕ ಜಲಮಂಡಳಿ, ದಸರಾ ಪ್ರಾಧಿಕಾರ, ಪ್ರವಾಸೋದ್ಯಮ ಪ್ರಾಧಿಕಾರ, ಪಾರಂಪರಿಕ ನಗರ ಘೋಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು 11 ಕ್ಷೇತ್ರದ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಬೇಡಿಕೆ ಇಟ್ಟಿದ್ದರು. ಅದರಲ್ಲೆಲ್ಲಾ ಮೈಸೂರಿಗೆ ಸಿಕ್ಕಿದ್ದು ಚಿಪ್ಪು ಎಂದು ಲೇವಡಿ ಮಾಡಿದರು.

ಸಂಸದ ಪ್ರತಾಪ್ ಸಿಂಹ ಅವರೇ ಬರೀ ಸುಳ್ಳುಗಳನ್ನ ಹೇಳಿಕೊಂಡು ಇನ್ನೆಷ್ಟು ದಿನ ಇರುತ್ತೀರಿ…

ನಾನೇ ಚಾಲೆಂಜ್ ಮಾಡಿದ್ದೆ ಮೈಸೂರಿಗೆ ಈ ಬಾರಿ ಬಜೆಟ್ ನಲ್ಲಿ 100ಕೋಟಿ ತೆಗೆದುಕೊಂಡು ಬರಲಿ ಸಾಕು ಎಂದಿದ್ದೆ. ಆದರೆ ಬಜೆಟ್ ನಲ್ಲಿ ಒಂದು ನಯಾಪೈಸೆ ಮೈಸೂರಿಗೆ ಸಿಕ್ಕಿಲ್ಲ. ಸಂಸದ ಪ್ರತಾಪ್ ಸಿಂಹರವರು ಈ ಬಾರಿ ವಿಮಾನ ನಿಲ್ದಾಣಕ್ಕೆ ಮತ್ತು ರೈಲ್ವೆ ಟರ್ಮಿನಲ್ ಗೆ ರಾಜ್ಯ ಸರ್ಕಾರದ ಪಾಲಿನ ಹಣ ಬರುತ್ತದೆ ಎಂದು ಹೇಳಿದ್ದರು. ಬಜೆಟ್ ನಲ್ಲಿ ಮೈಸೂರಿನ ವಿಮಾನ ನಿಲ್ದಾಣದ ಪ್ರಸ್ತಾಪವೇ ಆಗಿಲ್ಲ. ಹಾಸನ ವಿಮಾನ ನಿಲ್ದಾಣ, ಶಿವಮೊಗ್ಗ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹಣ ನೀಡಿದ್ದೀರಿ. ಸಂಸದ ಪ್ರತಾಪ್ ಸಿಂಹ ಅವರೇ ಬರೀ ಸುಳ್ಳುಗಳನ್ನ ಹೇಳಿಕೊಂಡು ಇನ್ನೆಷ್ಟು ದಿನ ಇರುತ್ತೀರಿ..? ಎಂದು ಎಂ. ಲಕ್ಷ್ಮಣ್ ಕಿಡಿಕಾರಿದರು.

ಒಕ್ಕಲಿಗೆ, ವೀರಶೈವ ಅಭಿವೃದ್ಧಿ ನಿಗಮಗಳಿಗೆ ಬಜೆಟ್ ನಲ್ಲಿ ಹಣ ನೀಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಒಕ್ಕಲಿಗ, ಲಿಂಗಾಯಿತ ಅಭಿವೃದ್ಧಿ ನಿಗಮಗಳಿಗೆ ಹಣ ನೀಡಿರುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ. ಎರಡೂ ಅಭಿವೃದ್ಧಿ ನಿಗಮಗಳಿಗೆ ತಲಾ 500 ಕೋಟಿ  ನೀಡಿ ಉಳಿಕೆ ಜಾತಿಗಳಿಗೆ 500 ಕೋಟಿ ನೀಡಿದೆ. ಉಳಿದ ಜಾತಿಗಳಿಗೆ ಅಭಿವೃದ್ಧಿ ಬೇಡವೇ..? ಮೊದಲ ಬಾರಿಗೆ ಜಾತಿ ಆಧಾರಿತವಾಗಿ ಬಿಜೆಪಿ ಬಜೆಟ್ ಮಂಡಿಸಿದೆ. ಈ ರೀತಿ ಮಾಡಿ ಜಾತಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.

ಅವರಿಗೆ ಏಕೆ ಧನ್ಯವಾದ ಹೇಳಿದ್ದಾರೋ ಗೊತ್ತಿಲ್ಲ…

ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಕಳೆದ ಒಂದು ಗಂಟೆ ಹಿಂದೆ ರಮೇಶ್ ಜಾರಕಿಹೊಳಿಯವರು ಕುಮಾರಸ್ವಾಮಿಯವರಿಗೆ ಧನ್ಯವಾದ ಹೇಳಿದ್ದಾರೆ. ಅವರಿಗೆ ಏಕೆ ಧನ್ಯವಾದ ಹೇಳಿದ್ದಾರೋ ಗೊತ್ತಿಲ್ಲ. ಇದರ ಸ್ಟೋರಿ, ಸ್ಕ್ರೀನ್ ಪ್ಲೇ ಎಲ್ಲಾ ಬಿಜೆಪಿಯವರದ್ದೇ. ಅದರ ಕುರಿತಾಗಿ ಸಿನಿಮಾ ಹಿನ್ನೆಲೆಯುಳ್ಳ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಅವರನ್ನ ಕೇಳಿದರೆ ಸಿಡಿಯ ಹಿಂದೆ ಯಾರಿದ್ದಾರೆ ಎಂದು ಹೇಳುತ್ತಾರೆ. ಬಾಂಬೆಗೆ ಹೋದವರಿಗೆ ಒಂದು ನಿಮಿಷವೂ ಬೇಸರವಾಗದಂತೆ ನೋಡಿಕೊಳ್ಳಲಾಗಿದೆ. ಎಲ್ಲಾ ಥರದ ಡ್ಯಾನ್ಸ್ ನೋಡಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ನಿಮ್ಮ ಪಕ್ಷದ ಹಿರಿಯ ಶಾಸಕ ವಿಶ್ವನಾಥ್ ಅವರನ್ನೇ ಕೇಳಿ, ಬಾಂಬೆ ಡೈರೀಸ್ ರೈಟರ್ ಅವರೇ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು.

ನೀವು ಒಬ್ಬ ಬಿಜೆಪಿ ಅಧ್ಯಕ್ಷರಾ..? ನಳೀನ್ ಕುಮಾರ್ ಕಟೀಲ್ ವಿರುದ್ದ ಕಿಡಿ…

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ದ ಕಿಡಿ ಕಾರಿದ ಎಂ.ಲಕ್ಷ್ಮಣ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೋಕರ್ ರೀತಿ ಮಾತಾಡುತ್ತಾರೆ. ಒಳ್ಳೆದ್ದಕ್ಕೂ, ಕೆಟ್ಟದ್ದಕ್ಕೂ, ಮಕ್ಕಳಾಗಿದ್ದಕ್ಕೂ ಎಲ್ಲಕ್ಕೂ ಕಾಂಗ್ರೆಸ್ ಹೊಣೆ ಮಾಡುತ್ತೀರಾ..? ನೀವು ಒಬ್ಬ ಬಿಜೆಪಿ ಅಧ್ಯಕ್ಷರಾ..? ಎಂದು ಪ್ರಶ್ನಿಸಿದರು.KPCC –spokesperson- M Laxman- criticized -state budget.

ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿ 24 ಗಂಟೆಯಲ್ಲಿ ಈ ಪ್ರಕರಣದ ಅಸಲಿ ಕಥೆಯನ್ನು ಪೊಲೀಸರು ಬಯಲಿಗೆ ತರುತ್ತಾರೆ. ಸಿ.ಪಿ.ಯೋಗೇಶ್ವರ್ ಬಳಿಯೇ ಸಿಡಿಗಳು ಇವೆ ಅಂತಾ ಹೇಳ್ತಾರೆ ಎಂದು ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ENGLISH SUMMARY…

 

KPCC Spokesperson M. Lakshmana criticizes state budget showing empty coconut shell
Mysuru, Mar. 09, 2021 (www.justkannada.in): KPCC Spokesperson M. Lakshmana today criticized the State Budget showing an empty coconut shell. “I had challenged to bring at least Rs.100 crore in the budget for Mysuru. But Mysuru has not been given a single paisa, Mysoreans have received empty coconut shell,” he said sarcastically.
He addressed a press meet in Mysuru today. “Including the Mysuru District In-charge Minister and several others, MLAs and several organisations were discussing what would Mysuru get, from the last 15 days. They had also proposed 16 demands including the establishment of a separate Water Supply and Sewerage Board, Dasara Authority, Tourism Authority, declaring Mysuru as Cultural City, etc.KPCC –spokesperson- M Laxman- criticized -state budget.
On the occasion, he alleged that the MP Pratap Simha of telling lies. “Pratap Simha had informed that the State Government would give grants for the Mysuru Airport and Railway terminal. But not even the name was proposed in the budget speech. Whereas grants have been announced for the development of airports at Hassan and Shivamogga,” he said.
Keywords: KPCC Spokesperson M. Lakshmana/ empty coconut shell/ State budget crticized

Key words: KPCC –spokesperson- M Laxman- criticized -state budget.