ಜಮೀನಿನ ವಿಷಯ ಕುರಿತು ಶಾಸಕ ಎಸ್.ಎ ರಾಮದಾಸ್ ಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್

ಮೈಸೂರು,ಜೂ,12,2020(www.justkannada.in): ಕುರುಬಾರಹಳ್ಳಿ ಸರ್ವೆ ನಂ. 4 ಮತ್ತು ಆಲನಹನಳ್ಳಿ ಗ್ರಾಮದ ಸರ್ವೆ ನಂ. 41ರ ವಿಚಾರ ಕುರಿತು ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ , ಬಹಿರಂಗ ಚರ್ಚೆಗೆ ಬರುವಂತೆ ಶಾಸಕ ಎಸ್.ಎ ರಾಮದಾಸ್ ಗೆ  ಆಹ್ವಾನ ನೀಡಿದರು.

ಕುರುಬಾರಹಳ್ಳಿ ಸರ್ವೆ ನಂ. 4 ಮತ್ತು ಆಲನಹನಳ್ಳಿ ಗ್ರಾಮದ ಸರ್ವೆ ನಂ41ರ ವಿಚಾರದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ರಿಂದ, ಜಮೀನಿನ ವಿಷಯದ ಕುರಿತು ಈ ಹಿಂದೆ ಸಿದ್ಧರಾಮಯ್ಯನವರ ಸಚಿವ ಸಂಪುಟ ಅನುಮೋದಿಸಿತ್ತು. ಬಿ ಕರಾಬಿನ ಕುರಿತಾಗಿ ಸರ್ಕಾರದ ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡಿರುವ ತೀರ್ಮಾನವನ್ನು ಬಹಿರಂಗ ಪಡಿಸಬೇಕು. ಜಮೀನಿನ ಕುರಿತಾಗಿ ನಾಗರೀಕರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಆದ್ದರಿಂದ ಗೋ. ಮಧುಸೂಧನ್ ಹಾಗೂ ಶಾಸಕ ಎಸ್. ಎ. ರಾಮದಾಸ್ ರಿಗೆ ಒಂದು ತಿಂಗಳ ಕಾಲಾವಕಾಶ ನೀಡುತ್ತಿದ್ದೇವೆ. ಅಷ್ಟರೊಳಗೆ ‘ಬಿ’ ಕರಾಬಿನ ಜಮೀನುಗಳಿಗೆ ಮುಕ್ತಿ ನೀಡಬೇಕು. ಇಲ್ಲದಿದ್ದರೆ ಈ ಮುಖಂಡರುಗಳ ಮನೆ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.kpcc-spokesperson-m-lakshmaninvited-sa-ramadas-discussion

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ ಎಂ.ಲಕ್ಷ್ಮಣ್, ಪೆಟ್ರೋಲ್, ಡೀಸಲ್ ಬೆಲೆಯನ್ನು ಬಿಜೆಪಿ ಸರ್ಕಾರ ದಿನೇ ದಿನೇ ಏರಿಸುತ್ತಿದೆ. ನೈಜ ಸತ್ಯವನ್ನು ಮೈಸೂರಿನ ನಾಗರೀಕರಿಗೆ ತಿಳಿಸುವ ಅವಶ್ಯಕತೆ ಇದೆ ಎಂದರು.

Key words: KPCC spokesperson- M. Lakshman-invited – SA Ramadas – discussion