ಕಾಂಗ್ರೆಸ್ ಟೀಕಿಸಲು ಬಿಜೆಪಿಯಿಂದ ಸುಪಾರಿ ಪಡೆದಿರುವ ಎಚ್ಡಿಕೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ

ಬೆಂಗಳೂರು, ಜನವರಿ 02, 2021 (www.justkannada.in): ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಜೆಡಿಎಸ್ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಿರುದ್ದ ಕಾಂಗ್ರೆಸ್ ಮಾತಾಡಿದರೆ ಅದಕ್ಕೆ ಜೆಡಿಎಸ್‌ನವರು ಉತ್ತರ ಕೊಡುತ್ತಾರೆ. ಕಾಂಗ್ರೆಸ್‌ ಟೀಕಿಸಲು ಬಿಜೆಪಿಯಿಂದ ಎಚ್‌.ಡಿ.ಕುಮಾರಸ್ವಾಮಿ ಸುಪಾರಿ ಪಡೆದಿದ್ದಾರೆ. ಜನರನ್ನ ದಿಕ್ಕುತಪ್ಪಿಸುವ ಕೆಲಸ ಕುಮಾರಸ್ವಾಮಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 26 ಡ್ಯಾಂ ಇವೆ. 21 ಡ್ಯಾಂ ಕಟ್ಟಿದ್ದು ಕಾಂಗ್ರೆಸ್. ಒಂದು ಡ್ಯಾಂ ಮೈಸೂರು ಅರಸರು ಕಟ್ಟಿದ್ದಾರೆ. ಇನ್ನೂ 4 ಕಟ್ಟಿದ್ದು ಬ್ರಿಟಿಷರು. ಹಾಗಾದರೆ ಎಚ್‌ ಡಿ ದೇವೇಗೌಡರ ಕೊಡುಗೆ ಏನು? ದೇವೇಗೌಡರು ಒಂದು ಡ್ಯಾಂ ಆದರೂ ಕಟ್ಟಿದ್ದಾರಾ ? ಬಿಜೆಪಿ ಆಡಳಿತದಲ್ಲಿ ಒಂದು ಡ್ಯಾಂ ಕಟ್ಡಿದ್ದಾರಾ ? ಎಂದು ಎಂ.ಲಕ್ಣ್ಮಣ್ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಂ.ಲಕ್ಣ್ಮಣ್ ಹೇಳಿದ್ದಿಷ್ಟು…
– ಮೇಕೆದಾಟು 66 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ವಿರುವ ಜಲಾಶಯದ ಯೋಜನೆ. ಸುಪ್ರೀಂ ಕೋರ್ಟ್ ಆಯಾ ರಾಜ್ಯದ ನೀರನ್ನ ಆಯಾ ರಾಜ್ಯವೆ ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದೆ. ಇದಕ್ಕೆ ಫಾರೆಸ್ಟ್ ಕ್ಲಿಯರೆನ್ಸ್ ಮಾತ್ರ ಬೇಕು. 5 ಎಕರೆ ಜಾಗವನ್ನು ಅರಣ್ಯದ ಬದಲಾಗಿ ಬೇರೆಡರ ಜಾಗ ನೀಡಬೇಕಿದೆ. ಇದಕ್ಕೂ ಸಿದ್ದರಾಮಯ್ಯ ಸರ್ಕಾರ ಡಾಂಡೇಲಿ ಮುಂತಾದ ಕಡೆ ಜಾಗ ನೀಡವುದಾಗಿ ಒಪ್ಪಿಗೆ ನೀಡಿತ್ತು.
– ಕುಮಾರಸ್ವಾಮಿ ಕಾವೇರಿ ನೀರಾವರಿ ಯೋಜನೆ ತಂದಿದ್ದು ದೇವೇಗೌಡರು ಎನ್ನುತ್ತಿದ್ದೀರಿ. 1974 ರಲ್ಲಿ ಡಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದರು. ಆಗ ನೀರವಾರಿ ಯೋಜನೆ ಆಗಿದ್ದು. ದೇವೆಗೌಡರ ಬಗ್ಗೆ ನಮಗೆ ಗೌರವ ಇದೆ. ಸಿದ್ದರಾಮಯ್ಯ ಸರ್ಕಾರ ಅವದಿಯ ಯೋಜನೆ ನಾವು ಹೇಳ್ತೇವೆ. ನೀವು ಯಾವ ನೀರಾವರಿ ಯೋಜನೆ ಮಾಡಿದ್ದೀರಿ ಹೇಳಿ. ಡಿಕೆ ಶಿವಕುಮಾರ್ ಸಮಾವೇಶ ಮಾಡ್ತಾ ಇರೋದ್ರಿಂದ ಒಕ್ಕಲಿಗೆ ಓಟ್ ಸಿಗಲ್ಲ ಅಂತ ಕಾಂಗ್ರೆಸ್ ಮೇಲೆ ಆರೋಪಗಳನ್ನ ಮಾಡುತ್ತಿದ್ದೀರಿ.

ಪ್ರತಾಪ್ ಸಿಂಹ ವಿರುದ್ಧವೂ ಕಿಡಿ, ಹೀಗಿತ್ತು ಟೀಕಾ ಪ್ರಹಾರ…
– ನಾನು ಇದೀನಿ ಅಂತ ತೋರಿಸಿಕೊಳ್ಳಲು ಆಗಾಗ ಬರ್ತಾರೆ. ಹುಣಸೂರಿನಲ್ಲಿ ಹನುಮ ಜಯಂತಿ ಹೆಸರಿನಲ್ಲಿ ಕಿಡಿ ಹಚ್ಚಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಹೆಸರಲ್ಲಿ ಕಿಡಿ ಹಚ್ಚುವ ಕೆಲಸ ಮಾಡಿದ್ದಾರೆ.
– ಸಚಿವ ಡಾ ಸುಧಾಕರ್ ಎಲ್ಲಿದ್ದೀರಾ ? 5 ದಿನದಿಂದ ಡಾ ಸುಧಾಕರ್ ಎಲ್ಲಿದ್ದಾರೆ ? ಈ ಬಗ್ಗೆ ಸರ್ಕಾರ ಉತ್ತರ ಕೊಡಬೇಕು. ಡಾ ಅಶ್ವಥ್ ನಾರಾಯಣ್ ಎಲ್ಲಿದ್ದಾರೆ? ಅತಿಥಿ ಉಪನ್ಯಾಸಕರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಸಚಿವರು ಅವರ ಸಮಸ್ಯೆ ಕೇಳುತ್ತಿಲ್ಲ. 5 ರಿಂದ 6 ಮಂತ್ರಿಗಳು ಹೊಸ ವರ್ಷ ಆಚರಣೆಗೆ ಶ್ರೀಲಂಕಾಗೆ ಹೋಗಿದ್ದಾರೆ. 10 ಸೀನಿಯರ್ ಐಎಎಸ್ ಅಧಿಕಾರಿಗಳು ಹೊರ ದೇಶಕ್ಕೆ ಹೋಗಿದ್ದಾರೆ. ಅವರ ಕುಟುಂಬದ ಜೊತೆ ವಿದೇಶ‌ ಪ್ರವಾಸಕ್ಕೆ ಹೋಗಿದ್ದಾರೆ. ಇದು ಬಿಜೆಪಿ ಸಚಿವರ ರಾಜ್ಯದ ಬಗ್ಗೆ ಕಾಳಜಿ ತೋರಿಸುತ್ತದೆ.