ಲಸಿಕೆ ವಿಚಾರದಲ್ಲಿ ಸರಕಾರ ವಿಫಲ, ಅನಗತ್ಯ ಗೊಂದಲ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

ಮೈಸೂರು, ಮೇ 16, 2021 (www.justkannada.in): ರಾಜ್ಯ ಹಾಗೂ ಕೇಂದ್ರ ಲಸಿಕೆ ವಿಚಾರವಾಗಿ ವಿಫಲವಾಗಿದೆ. ಜೊತೆಗೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಂದಲೇ ಮೋದಿ ಗೆದ್ದಿರುವುದು. ಶೇ.52ರಷ್ಟು 18 ರಿಂದ 44 ವರ್ಷದವರಾಗಿದ್ದಾರೆ. 72 ಕೋಟಿ‌ ಜನರಿದ್ದಾರೆ. ರಾಜ್ಯದಲ್ಲಿ 3 ಕೋಟಿಯಷ್ಟು ಜನರಿದ್ದಾರೆ. ಅವರಿಗೆ ಯಾವಾಗ ಲಸಿಕೆ ಕೊಡುತ್ತಾರೆ ಅನ್ನೋ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ಕೊರೊನಾ ಪರೀಕ್ಷೆ ಕಡಿಮೆ ವಿಚಾರ. ಪರೀಕ್ಷೆ ಕಡಿಮೆ ಮಾಡಿರುವುದು ಸರಿಯಾದ ಕ್ರಮವಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾಗಲು ಸರ್ಕಾರವೇ ಕಾರಣವಾಗಿದೆ. ಇದೇ ಕಾರಣಕ್ಕೆ ಗ್ರಾಮೀಣ‌ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಇದು ದುರಂತದ ಸಂಗತಿಯಾಗಿದೆ. ಪ್ರಚಾರಕ್ಕಾಗಿ ಸಂಸದ ಪ್ರತಾಪ್‌ಸಿಂಹ ಕೆಲಸ‌ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಪ್ರಚಾರ ಪ್ರಿಯ ಪ್ರತಾಪ್‌ಸಿಂಹ

ಚಾಮರಾಜನಗರಕ್ಕೆ ಪ್ರತಾಪ್‌ಸಿಂಹ ಸಿಲಿಂಡರ್ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖಾ ಸಂದರ್ಭದಲ್ಲಿ ಅವರ ಹೆಸರು ಉಲ್ಲೇಖ ಇಲ್ಲ. ಇದರಿಂದ ಅವರು ಆ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆ.  ಮೈಸೂರಿಗೆ ಬಿಜೆಪಿ ಕೊಡುಗೆ ಏನು ? ಎಂಬುದನ್ನು ಸಂಸದ ಪ್ರತಾಪ್‌ಸಿಂಹ ಹೇಳಲಿ, ಅದನ್ನು ಕಾಂಗ್ರೆಸ್ ಪಕ್ಷ ಮನೆ ಮನೆಗೆ ಹೋಗಿ ಪ್ರಚಾರ ಮಾಡಲಿದೆ ಎಂದು ಹೇಳಿದರು.

ಪೋಲಿಸರ ಕಾರ್ಯವೈಖರಿಗೆ ಮೆಚ್ಚುಗೆ

ಲಾಕ್‌ಡೌನ್ ವೇಳೆ ಮೈಸೂರು ಪೋಲಿಸರ ಕಾರ್ಯವೈಕರಿಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ. ಮೈಸೂರು ಪೊಲೀಸರು ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಇವರಿಂದ ರಾಜ್ಯದ ಪೊಲೀಸರು ಬುದ್ದಿ ಕಲಿಯಬೇಕು. ಎಲ್ಲಿಯೂ ಅಟ್ಟಾಡಿಸಿ ಹೊಡೆಯದೆ ಎಲ್ಲವನ್ನೂ ನಿಯಂತ್ರಿಸಿದ್ದಾರೆ. ನಗರ ಪೊಲೀಸ್ ಆಯುಕ್ತರು, ಡಿಸಿಪಿ ಸೇರಿ ಎಲ್ಲರಿಗೂ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ಸಾವಿನ ಲೆಕ್ಕ ತಪ್ಪು ಕೊಡುತ್ತಿರುವ ಜಿಲ್ಲಾಡಳಿತ

ಮೈಸೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕಡಿಮೆ ಸಂಖ್ಯೆಯನ್ನು ಸರ್ಕಾರ ನೀಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಣ್ಮಣ ಗಂಭೀರ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ದಿನಕ್ಕೆ 75 ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ ಕೇವಲ 10 ರಿಂದ 15 ಲೆಕ್ಕ ಕೊಡುತ್ತಿದ್ದಾರೆ. ಎಲ್ಲವನ್ನೂ ಮುಚ್ಚಿ ಹಾಕುವಂತ ಕೆಲಸ ಆಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಸಮನ್ವಯತೆ ಕೊರತೆಯಿದೆ. ಸಚಿವರು ಶಾಸಕರು ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ ಎಂದು ದೂರಿದರು.