ಪಾದಯಾತ್ರೆ ಟೀಕಿಸಿ ಟ್ವೀಟ್ ಮಾಡಿದ್ಧ ಹೆಚ್.ಡಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು ಹೀಗೆ.

kannada t-shirts

ಬೆಂಗಳೂರು,ಡಿಸೆಂಬರ್,29,2021(www.justkannada.in):  ನನ್ನನ್ನೂ ಸೇರಿ 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿ’ ಹಾಕುತ್ತಿದ್ದಾರೆ ಎಂದು ಟ್ವಿಟ್ ಮಾಡಿ ಟೀಕಿಸಿದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಹೆಚ್‌ಡಿಕೆ ಹಿರಿಯರು, ಬುದ್ಧಿವಂತರು, ಹೋರಾಟಗಾರರು. ಹೆಚ್.ಡಿ ಕುಮಾರಸ್ವಾಮಿ ಕುಟುಂಬದವರೇ ಹೋರಾಟಗಾರರು. ಅವರ ಮನೆಯಲ್ಲಿ ಸಾಹಿತ್ಯ, ನಿರ್ದೇಶನ ಎಲ್ಲವೂ ಇದೆ. ಫಿಲ್ಮ್ ಪ್ರೊಡ್ಯೂಸರ್ ಕೂಡ ಇದ್ದಾರೆ ಎಂದು  ಲೇವಡಿ ಮಾಡಿದ್ದಾರೆ.

ನಾನು ಹಳ್ಳಿಯವನು, ನಮಗೆ ವಿದ್ಯೆ ಕಡಿಮೆ, ನಮ್ಮಪ್ಪ ರೈತ. ನಾನು ಯಾವುದೇ ಜಾತಿ ಮೇಲೆ ರಾಜಕಾರಣವನ್ನು ಮಾಡಲ್ಲ. ನನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನೂರಾರು ನಾಯಕರು ಇದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ನನ್ನ ಕೋಟೆ ಎಲ್ಲಾ ಬಿದ್ದೋಗಿದೆ. ಸೋಲು ಗೆಲುವು ಸಹ ಅವರಿಂದ ಕಲಿತುಕೊಳ್ಳಬೇಕಿದೆ. ನಾವು ನಾಡಿನ ಹಿತಕ್ಕಾಗಿ ಹೋರಾಟವನ್ನು ಮಾಡುತ್ತಿದ್ದೇವೆ. ಹೆಚ್.ಡಿ ಕುಮಾರಸ್ವಾಮಿ ಟ್ವೀಟ್‌ನಲ್ಲಿ ಸಾಹಿತ್ಯವಿದೆ, ಅದನ್ನು ಕಲಿಯಬೇಕಿದೆ. ಹೆಚ್.ಡಿಕೆ ಅವರಿಂದ ಕಲಿಯಬೇಕಾದದ್ದು ಇದೆ ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

Key words: KPCC President -DK Shivakumar –HD Kumaraswamy- tweet

website developers in mysore