ಜನಕ್ಕೆ ತೊಂದರೆಯಾದಾಗ ಗುಂಡಿ ಮುಚ್ಚಿಲ್ಲ: ನಾಯಕರು ಬರ್ತಾರೆ ಅಂತಾ ಗುಂಡಿ ಮುಚ್ಚಿದ್ರು- ಬಿಜೆಪಿ ವಿರುದ್ಧ ಡಿ.ಕೆ ಶಿವಕುಮಾರ್ ಗುಡುಗು.

ಬೆಂಗಳೂರು,ಜೂನ್,24,2022(www.justkannada.in):  ಬೆಂಗಳೂರಿನಲ್ಲಿ ಕಳಪೆ ರಸ್ತೆ ಡಾಂಬರೀಕರಣ ಪ್ರಕರಣ ತನಿಖೆಗೆ ಪ್ರಧಾನಿ ಕಚೇರಿ ಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಬಿಜೆಪಿ ವಿರುದ್ಧ ಗುಡುಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ , ಜನಕ್ಕೆ ತೊಂದರೆಯಾಗುತ್ತಿದೆ ಎಂದಾಗ ಗುಂಡಿ ಮುಚ್ಚಿಲ್ಲ .ನಾಯಕರು ಬರ್ತಾರೆ ಎಂದಾಗ ಗುಂಡಿ ಮುಚ್ಚಿದರು. ಅವರಿಗೆ ಜನ ಮುಖ್ಯ ಅಲ್ಲ.ಅವರ ನಾಯಕರು ಅಲ್ಲಾಡಬಾರದು  ಎಂದು ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಕಚೇರಿಯಲ್ಲಿ ಬೋರ್ಡ್ ಹಾಕಿದ್ದಕ್ಕೆ ನೊಟೀಸ್ ಕೊಟ್ಟರು .ಆದರೆ, ಅವರು ಎಲ್ಲಾ ಕಡೆ ಫ್ಲೆಕ್ಸ್ ಹಾಕಿದರೂ ಅದು ಕಾಣಲಿಲ್ಲ.  ನೊಟೀಸ್ ಕೊಡುವುದಿಲ್ಲ. ಬಿಜೆಪಿಯವರು ಮಾಡಿದ ತಪ್ಪುಗಳ ವಿರುದ‍್ಧ ಹೋರಾಟ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಇಡಿ ಸಮನ್ಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಇಲ್ಲದ ಕೇಸ್ ಗಳನ್ನ ತಿರುಚುವ ಕೆಲಸವಾಗುತ್ತಿದೆ. ನಮ್ಮ ನಾಯಕರು ಮತ್ತು ನಮಗೆ  ಸಮನ್ಸ್ ನೀಡಿದ್ದಾರೆ. ಇದಕ್ಕೆ ಏನು ಉತ್ತರ ಕೊಡಬೇಕು ಕೊಡ್ತೇವೆ. ನಮ್ಮ ರಾಷ್ಟ್ರೀಯ ನಾಯಕರಿಗೆ ಇಡಿ‌ ವಿಚಾರಣೆ ನಡೆಸುತ್ತಿದ್ದಾರೆ. ಸೋನಿಯಾಗಾಂಧಿ ಅವರು ಸಮಯಾವಕಾಶ ಕೇಳಿದ್ದಾರೆ. ರಾಹುಲ್ ಗಾಂಧಿ ಅವರಿಗೆ 5 ದಿನ ವಿಚಾರಣೆ ಮಾಡಿದ್ದಾರೆ. ಅಷ್ಟು ದಿನ ಮಾಡುವಂತದ್ದು ಇರಲಿಲ್ಲ. ನನಗೂ ಇಡಿ ನೋಟಿಸ್ ಕೊಟ್ಟಿದೆ.ಈಗಾಗಲೇ ಸಮನ್ಸ್ ಕೊಟ್ಟಿದ್ದಾರೆ. ವಿಚಾರಣೆಗೆ ಹೋಗುತ್ತೇನೆ ಎಂದರು.

Key words: KPCC-President- DK Shivakumar – against -BJP.