ಏನಾದ್ರೂ ಮಾಡಿ ಪಾದಯಾತ್ರೆ ನಿಲ್ಲಿಸುವ ಉದ್ದೇಶ: ನನ್ನ ವಿರುದ್ಧ ಸರ್ಕಾರದಿಂದ ದೊಡ್ಡ ಸಂಚು- ಡಿ.ಕೆ ಶಿವಕುಮಾರ್ ಆರೋಪ.

kannada t-shirts

ರಾಮನಗರ,ಜನವರಿ,10,2022(www.justkannada.in): ಏನಾದ್ರೂ ಮಾಡಿ ಪಾದಯಾತ್ರೆ ನಿಲ್ಲಿಸುವ ಉದ್ದೇಶವನ್ನ ಸರ್ಕಾರ  ಹೊಂದಿದ್ದು ಹೀಗಾಗಿ ನನ್ನ ವಿರುದ್ಧ ದೊಡ್ಡ ಸಂಚು ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನನಗೆ ಕೊರೊನಾ ಅಂಟಿಸಲು ಷಡ್ಯಂತ್ರ ನಡೆದಿದೆ. ರಾಜ್ಯ ಸರ್ಕಾರ ನನ್ನ ಮೇಲೆ ದೊಡ್ಡ ಸಂಚು ನಡೆಸುತ್ತಿದೆ. ಏನಾದ್ರೂ ಮಾಡಿ ಪಾದಯಾತ್ರೆ ನಿಲ್ಲಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿಯೇ ನಿನ್ನೆ ಎಡಿಸಿ ಅವರನ್ನು ನನ್ನ ಬಳಿ ಕಳಿಸಿದ್ರು. ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಈ ಅಧಿಕಾರಿ ಹೇಳಿದ್ರು. ಪಾಪ,ಅವರ ಬಗ್ಗೆ ನನ್ನ ತಕರಾರಿಲ್ಲ. ಅವರು ಕಳಿಸಿದ್ರು,ಇವರು ಬಂದಿದಾರೆ ಅಷ್ಟೇ. ನನ್ನ ಜತೆ ಅರ್ಧ ಡಜನ್ ಡಾಕ್ಟರುಗಳಿದ್ದಾರೆ.ಏನಾದ್ರೂ ಆದ್ರೆ ಹೇಳ್ತಾರೆ. ಆದ್ರೆ ಬಿಜೆಪಿಯವರಿಗೆ ಪಾದಯಾತ್ರೆ ಬಗ್ಗೆ ಆತಂಕ ಶುರುವಾಗಿದೆ. ಯಾಕಂದರೇ ರಾಜ್ಯದಲ್ಲಿ ಜಾರಿಯಾಗಿರೋದು ಕೊರೊನಾ ಲಾಕ್ ಡೌನ್ ಅಲ್ಲ, ಬಿಜೆಪಿಯ ಲಾಕ್ ಡೌನ್. ಮುಂದಿನ‌ ಮೂರು ದಿನ ಮೌನ ಪಾದಯಾತ್ರೆ ನಡೆಸ್ತೀವಿ ಎಂದು ತಿಳಿಸಿದರು.

ಪಾಸಿಟಿವ್ ವರದಿ ತರಲು ಅಧಿಕಾರಿಯನ್ನ ಕಳಿಸಿದ್ರು.  ನನ್ನ ಭೇಟಿಗೆ ಬಂದಿದ್ದ ಅಧಿಕಾರಿಗೆ ಕೊರೋನಾ  ಬಂದಿದೆ.  ನನ್ನ ಪ್ರಾಥಮಿಕ ಸಂಪರ್ಕದಲ್ಲಿರುವ ಹಾಗೆ ಮಾಡಿದೆ.  ಕೊರೋನಾ ಬರಿಸುವ ಕೆಲಸದಲ್ಲಿ ಸರ್ಕಾರ ನಿರತವಾಗಿದೆ. ರಾಜಕೀಯಕ್ಕಾಗಿ ಜನರನ್ನ ಸಾಯಿಸಲು ಹೊರಟಿದೆ.  ಸರ್ಕಾರದ ಅಂಕಿ ಅಂಶ ಸುಳ್ಳು ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

Key words: kpcc-president- DK Shivakumar- accused- Government

website developers in mysore