ಎಚ್.ವಿಶ್ವನಾಥ್ ಎಲ್ಲವನ್ನೂ ಮಾರಿಕೊಂಡಿದ್ದಾರೆ, ಸಿದ್ದರಾಮಯ್ಯ ಒಂಟಿಯಲ್ಲ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Promotion

ಮೈಸೂರು, ನವೆಂಬರ್, 24, 2019 (www.justkannada.in): ಉಪಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಪಿ‌.ಸಿ‌.ಸಿ. ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

ಎಲ್ಲರು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ದೂರಲು ವಿಚಾರಗಳಿಲ್ಲ. ಈ ಕಾರಣದಿಂದ ಸಿದ್ದರಾಮಯ್ಯ ಒಂಟಿ ಅಂತ ಹೇಳುತ್ತಿದ್ದಾರೆ. ಪರಮೇಶ್ವರ ಆರೋಗ್ಯದ ಕಾರಣ ಪ್ರಚಾರಕ್ಕೆ ಬಂದಿರಲಿಲ್ಲ. ಡಿಕೆಶಿ ಮೇಲೆ ಬಿಜೆಪಿಯವರು ಕಿರುಕುಳ ನೀಡಿದ್ರು. ಅದರಿಂದ ಹೊರಬರಬೇಕಾಯ್ತು. ಅವರು ಕೂಡ ನಾಳೆಯಿಂದ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಖರ್ಗೆಯವರಿ ಮಹಾರಾಷ್ಟ್ರದ ಉಸ್ತುವಾರಿ ಇರುವ ಕಾರಣ ಅಲ್ಲಿ ಸಮಸ್ಯೆ ಮುಗಿದ ಬಳಿಕ ಬರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಎಲ್ಲಾ ನಾಯಕರು ಪ್ರಚಾರ ನಡೆಸುತ್ತಿದ್ದೇವೆ. ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ, ಬಿಜೆಪಿಗೆ ಮುಖಭಂಗಮಾಡುತ್ತೇವೆ ಎಂದು ಮೈಸೂರಿನಲ್ಲಿ ಕೆ.ಪಿ‌.ಸಿ‌.ಸಿ. ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅನರ್ಹ ಶಾಸಕ ಎಚ್.ವಿಶ್ವನಾಥ್ ಬಗ್ಗೆ ಮೊದಲು ನನಗೆ ಗೌರವ ಇತ್ತು. ಆದ್ರೆ ಇದೀಗಾ ಅವರು ಎಲ್ಲವನ್ನು ಮಾರಾಟ ಮಾಡಿಕೊಂಡಿದ್ದಾರೆ. ಅವರಲ್ಲಿ ಯಾವುದೇ ಮೌಲ್ಯಗಳಿಲ್ಲ. ಅವರೊಬ್ಬ ಮುತ್ಸದಿ ರಾಜಕಾರಣಿ ಅಂದುಕೊಂಡಿದ್ವಿ ಆದ್ರೆ ಇದೀಗಾ ಅವರ ಮೇಲೆ ಗೌರವ ಇಲ್ಲ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.