ಕಾಲಿವುಡ್ ನಟ ಅಜಿತ್ ಕುಮಾರ್ 61ನೇ ಸಿನಿಮಾ ಹೆಸರು ರಿವೀಲ್

Promotion

ಬೆಂಗಳೂರು, ಸೆಪ್ಟೆಂಬರ್ 22 (www.justkannada.in): ಕಾಲಿವುಡ್‌ ನಟ ಅಜಿತ್‌ ಕುಮಾರ್‌ 61ನೇ ಸಿನಿಮಾ ಹೆಸರು ರಿವೀಲ್‌ ಆಗಿದೆ.

ಅಜಿತ್‌ ಅವರ ಮಾಸ್‌ ಲುಕ್‌ ಎಲ್ಲರಿಗೂ ಇಷ್ಟವಾಗಿದ್ದು, ಚಿತ್ರ ಪೋಸ್ಟರ್‌ ಹೈಪ್‌ ಸೃಷ್ಟಿಮಾಡಿದೆ.

ಖ್ಯಾತ ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ನಿರ್ದೇಶಕ ಎಚ್‌.ವಿನೋದ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರಕ್ಕೆ ತುನಿವು ಎಂದು ಹೆಸರಿಡಸಲಾಗಿದೆ., ʻನೋ ಗಟ್ಸ್ ನೋ ಗ್ಲೋರಿʼ ಎಂಬ ಟ್ಯಾಗ್‌ ಲೈನ್‌ ನೀಡಲಾಗಿದೆ. ಈ ಚಿತ್ರಕ್ಕೆ ಮಾಲಿವುಡ್‌ ನಟಿ ಮಂಜು ವಾರಿಯರ್‌ ನಾಯಕಿಯಾಗಿ ನಟಿಸಲಿದ್ದಾರೆ.

ಅಂದಹಾಗೆ ಅಜಿತ್ ನಟನೆಯ ಈಚೆಗಿನ ‘ವಿವೇಗಮ್’, ‘ವೀರಮ್’ ಹಾಗೂ ‘ವಲಿಮೈ’ ಚಿತ್ರಗಳು ಹಿಟ್‌ ಆಗಿದ್ದವು.