ಅಯೋಧ್ಯೆಯ ರಾಮಮಂದಿರಕ್ಕೂ ಕರ್ನಾಟಕದ ಗಡಿ ಪ್ರದೇಶ ಕೊಳ್ಳೇಗಾಲಕ್ಕೂ ಈಗ ಬಿಡಿಸದ ಬಂಧ..!

kollegala-granite-from-Karnataka-to-raise-temple-plinth

kannada t-shirts

 

ಅಯೋಧ್ಯ, ಸೆಪ್ಟೆಂಬರ್ ೨೨, ೨೦೨೧ (www.justkannada.in): ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಮಂದಿರದ ಅಡಿಪಾಯ ನಿರ್ಮಾಣ ಪೂರ್ಣಗೊಂಡ ನಂತರ ಕಟ್ಟಡದ ಎತ್ತರವನ್ನು ಸಮುದ್ರ ಮಟ್ಟದಿಂದ ಮೇಲಕ್ಕೆ ೧೦೭ ಮೀ. ವರೆಗೆ ಹೆಚ್ಚಿಸುವ ಎರಡನೇ ಹಂತದ ನಿರ್ಮಾಣ ಕಾಮಗಾರಿಗಳು ಮಂಗಳವಾರ ಆರಂಭವಾದವು.

ಕಾಮಗಾರಿ ಆರಂಭಿಸುವುದಕ್ಕೆ ಮುಂಚೆ ಪ್ರಸ್ತಾಪಿತ ಗರ್ಭಗುಡಿಯ ಸ್ಥಳದಲ್ಲಿ ವಿಶೇಷ ‘ಮುಹೂರ್ತದಲ್ಲಿ’ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಲಾಯಿತು. ಕಟ್ಟಡದ ಎತ್ತರವನ್ನು ಹೆಚ್ಚಿಸುವ ಸ್ತಂಭಗಳನ್ನು ನಿರ್ಮಿಸಲು ಇದೇ ಮೊದಲ ಬಾರಿಗೆ ಕರ್ನಾಟಕದ ಕೊಳ್ಳೇಗಾಲ ಪ್ರದೇಶ ವ್ಯಾಪ್ತಿಯಡಿ ಬರುವ ಅರಣ್ಯಗಳಲ್ಲಿರುವ ಕ್ವಾರಿಗಳಿಂದ ಕಪ್ಪು ಗ್ರಾನೈಟ್ ಕಲ್ಲುಗಳನ್ನು ಸಾಗಿಸಲಾಗಿದೆ. ಜೊತೆಗೆ ರಾಜಸ್ತಾನದ ಬನ್ಸಿ ಪರ್ಪು ರ್‌ನಿಂದ ವಿಶೇಷ ಗುಲಾಬಿ ಬಣ್ಣದ ಮಾರ್ಬಲ್ ಹಾಗೂ ಕೆತ್ತನೆ ಮಾಡಿರುವ ಕಲ್ಲುಗಳನ್ನೂ ಸಹ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ಸಾಗಿಸಲಾಗಿದೆ.

ದೇವಾಲಯ ನಿರ್ಮಾಣ ಕಾಮಗಾರಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ದೇವಸ್ಥಾನದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಅವರು ತಿಳಿಸಿದಂತೆ, “ಗರ್ಭಗುಡಿ ನಿರ್ಮಾಣಕ್ಕೆ ಮೊದಲ ಕಲ್ಲನ್ನು ಅಳವಡಿಸುವ ಮುಂಚೆ ವೇದ ಮಂತ್ರ ಪಠಣದೊಂದಿಗೆ ಭಗವಾನ್ ವಿಶ್ವಕರ್ಮನನ್ನು ಆರಾಧಿಸಲಾಯಿತು. ಕೊಳ್ಳೇಗಾಲ ಹಾಗೂ ಮಿರ್ಜಾಪುರದಿಂದ ಈಗಾಗಲೇ ಕಲ್ಲುಗಳ ರವಾನೆ ಆರಂಭವಾಗಿದೆ.”
ಮೂರು ದಶಕಗಳ ಅಯೋಧ್ಯೆಯ ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ ದೇಶದ ವಿವಿಧೆಡೆಗಳಿಂದ ಸಂಗ್ರಹಿಸಲಾಗಿರುವಂತಹ ೨ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಇಟ್ಟಿಗೆಗಳನ್ನು ದೇವಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಟ್ರಸ್ಟ್ನ ಉನ್ನತ ಮೂಲಗಳು ತಿಳಿಸಿವೆ.

೧೯೮೯ರಿಂದಲೂ ‘ರಾಮ’ನ ಹೆಸರಿನ ಕೆತ್ತನೆಯಿರುವ ಸುಮಾರು ೩ ಲಕ್ಷಕ್ಕೂ ಹೆಚ್ಚಿನ ಇಟ್ಟಿಗೆಗಳನ್ನು ದೇವಾಲಯ ನಿರ್ಮಾಣಕ್ಕಾಗಿ ಕ್ರೋಢೀಕರಿಸಲಾಯಿತು, ಆದರೆ ನಂತರದಲ್ಲಿ ಅವುಗಳನ್ನು ರಾಮಜನ್ಮಭೂಮಿ ನಿರ್ಮಾಣ ಕಾರ್ಯಶಾಲೆಯಲ್ಲಿ ಸಂಗ್ರಹಿಸಲಾಗಿತ್ತು.

ಈಗ ಆ ಇಟ್ಟಿಗೆಗಳನ್ನು ದೇವಾಲಯ ನಿರ್ಮಾಣ ಕಾರ್ಯಗಾರಕ್ಕೆ ಸ್ಥಳಾಂತರಿಸಲಾಗುವುದು. ಈ ಕುರಿತು ಮಾತನಾಡಿದ ದೇವಾಲಯದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಅವರು, “ರಾಮಜನ್ಮಭೂಮಿಯಲ್ಲಿ ಕರ ಸೇವಕರಿಂದ ೧೯೮೯ರಲ್ಲಿ ಶಿಲಾನ್ಯಾಸ ನಡೆಸಿದಾಗ ಒಂದು ಲಕ್ಷ ಕಲ್ಲುಗಳನ್ನು ಇಡಲಾಗಿತ್ತು. ಮಿಶ್ರಾ ಅವರ ಪ್ರಕಾರ ಇನ್ನೂ ೨ ಲಕ್ಷ ಇಟ್ಟಿಗೆಗಳು ಹಳೆಯ ಕಾರ್ಯಾಲಯದಲ್ಲಿವೆ, ಇವುಗಳನ್ನು ನಿರ್ಮಾಣ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಈ ಇಟ್ಟಿಗೆಗಳು ಹಲವು ಕೋಟಿ ಭಾರತೀಯರ ನಂಬಿಕೆಯ ಪ್ರತೀಕವಾಗಿದೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ

 

key words : kollegala-granite-from-Karnataka-to-raise-temple-plinth

 

website developers in mysore