ಮಹಾಮಾರಿ ಕೊರೋನಾಗೆ ಟಿಎಂಸಿ ಶಾಸಕ ಬಲಿ…

ಕೋಲ್ಕತ್ತ,ಜೂ,24,2020(www.justkannada.in):  ಮಹಾಮಾರಿ ಕರೊನಾ ಸೋಂಕಿಗೆ  ಪಶ್ಚಿಮ ಬಗಾಳದಲ್ಲಿ ಟಿಎಂಸಿ ಶಾಸಕ ಬಲಿಯಾಗಿದ್ದಾರೆ.

ಪಶ್ಚಿಮಬಂಗಾಳದ ಟಿಎಂಸಿ​ ಶಾಸಕ ತಮೋನಾಶ್ ಘೋಷ್ (60)  ಕೊರೋನಾ ಸೋಂಕಿನಿಂದ ಬೆಳಗ್ಗೆ ಮೃತಪಟ್ಟಿದ್ದಾರೆ. ತಮೋನಾಶ್ ಘೋಷ್ ಅವರಿಗೆ ಕಳೆದ ತಿಂಗಳು ಕರೊನಾ ಇರುವುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.kolkatta-tmc-mla-death-corona

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮೋನಾಶ್​ ಘೋಷ್​ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಫಾಲ್ಟಾದಿಂದ ಮೂರು ಬಾರಿ ಶಾಸಕರಾಗಿದ್ದ ತಮೋನಾಶ್​ ಘೋಷ್​ ಅವರು 1998ರಿಂದಲೂ ಪಕ್ಷದ ಖಜಾಂಚಿಯಾಗಿದ್ದರು. 35 ವರ್ಷಗಳಿಂದ ನಮ್ಮ ಜತೆ ಇದ್ದ ಅವರೀಗ ಎಲ್ಲರನ್ನೂ ಅಗಲಿದ್ದಾರೆ. ಅವರ ಸ್ಥಾನವನ್ನು ಯಾರಿಂದಲೂ ತುಂಬಲಾಗದು. ಅವರ ಪತ್ನಿ, ಮಕ್ಕಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

Key words: kolkatta-TMC -MLA –death-Corona