ಮೇಡಮ್ ಟುಸ್ಸಾಡ್ಸ್ ನಲ್ಲಿ ಕಿಂಗ್ ಕೊಹ್ಲಿ ಮೇಣದ ಪ್ರತಿಮೆ

ಬೆಂಗಳೂರು, ಅಕ್ಟೋಬರ್ 19, 2021 (www.justkannada.in): ದುಬೈನ ಮೇಡಮ್ ಟುಸ್ಸಾಡ್ಸ್ ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಭಾರತೀಯ ನಾಯಕ ಪ್ರಸ್ತುತ ಯುಎಇಯಲ್ಲಿ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ.

ಮೇಣದ ಪ್ರತಿಮೆಯ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತು ಮತ್ತು ಅಂದಿನಿಂದ ವೈರಲ್ ಆಗಿದೆ. ಅಭಿಮಾನಿಗಳು ಪ್ರತಿಮೆ ಚಿತ್ರವನ್ನು ಸುಂದರವಾದ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಮೊಂಡಾ ದಲ್ಲಿ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಿರತರಾಗಿದ್ದರಿಂದ ಕೊಹ್ಲಿ ಆ ಪ್ರತಿಮೆಯನ್ನು ನೋಡಿದ್ದಾರೆಯೇ ಗೊತ್ತಾಗಿಲ್ಲ.