ಆಕ್ಲೆಂಡ್​ನಲ್ಲಿ ಕೊಹ್ಲಿ ಆ್ಯಂಡ್ ಟೀಂ ಫ್ರಿ ಮ್ಯಾಚ್ ಮಸ್ತಿ !

ಬೆಂಗಳೂರು, ಜನವರಿ 22, 2019 (www.justkannada.in): ಟಿ-ಟ್ವೆಂಟಿ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಟೀಮ್ ಇಂಡಿಯಾ ನ್ಯೂಜಿಲೆಂಡ್ ತಲುಪಿದೆ.

ಕಿವೀಸ್ ನಾಡಿಗೆ ಕಾಲಿಡುತ್ತಿದ್ದಂತೆ, ಕೊಹ್ಲಿ ಬಾಯ್ಸ್​ ಫುಲ್ ಥ್ರಿಲ್ ಆಗಿದ್ದಾರೆ. ಆಕ್ಲೆಂಡ್​ನಲ್ಲಿ ರುಚಿಕರ ಭೋಜನ ಸೇವಿಸಿದ ಟೀಮ್ ಇಂಡಿಯಾ ಆಟಗಾರರು, ನಂತರ ಜಿಮ್​ನಲ್ಲಿ ವರ್ಕ್​ಔಟ್ ಮಾಡಿ ಕಾಲ ಕಳೆದಿದ್ದಾರೆ.

ಕೊಹ್ಲಿ ತಂಡದ ಇತರೆ ಆಟಗಾರರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಬ್ಯೂಸಿಯಾಗಿದ್ರು. ಮತ್ತೊಂದೆಡೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್​.ಶ್ರೀಧರ್, ಆಕ್ಲೆಂಡ್​ನ ಸುಂದರ ತಾಣಗಳಿಗೆ ಭೇಟಿ ನೀಡಿ ರಿಲ್ಯಾಕ್ಸ್ ಆಗಿದ್ದಾರೆ.