ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ: ಅರೆಂಜ್ ಅಲರ್ಟ್ ಘೋಷಣೆ….

ಕೊಡಗು,ಸೆ,6,2019(www.justkannada.in): ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮಳೆ ಇದೀಗ ಕೊಂಚ ಕಡಿಮೆಯಾಗಿದೆ. ನಿನ್ನೆ ಮಧ್ಯಾಹ್ನದ ಬಳಿಕ  ಮಳೆರಾಯನ ಆರ್ಭಟ ಕಡಿಮೆಯಾಗಿದ್ದು  ತುಂತುರು ಮಳೆ ಮುಂದುವರೆದಿದೆ.

ಕೊಡಗು  ಜಿಲ್ಲೆಯಲ್ಲಿ 115 ಮಿ ಮೀ ಗಿಂತ ಅಧಿಕ ಮಳೆ ಸುರಿಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ವರದಿ ಆಧರಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ನಾಪೋಕ್ಲು ಭಾಗಮಂಡಲ ರಸ್ತೆ ಈಗಲೂ ಬಂದ್ ಆಗಿದೆ.

ಇನ್ನು ಭಾಗಮಂಡಲ‌ ತಲಕಾವೇರಿ ಸಂಚಾರ ಸುಗಮವಾಗದ್ದು, ಎಂದಿನಂತೆ ಭಾಗಮಂಡಲ‌ ತಲಕಾವೇರಿ ಕ್ಷೇತ್ರಕ್ಕೆ ಸಂಚಾರ ಆರಂಭವಾಗಿದೆ. ಭಾರಿ ಮಳೆ ಪ್ರವಾಹದಿಂದ ನಲುಗಿದ್ದ ಕೊಡಗಿನ ಜನತೆಗೆ ಸ್ವಲ್ಪ ಆತಂಕ ಕಡಿಮೆಯಾಗಿದೆ.

Key words: Kodagu –district-rain-Orange Alert -Declaration