ಸಂಪುಟ ವಿಸ್ತರಣೆ ವೇಳೆ ಕೊಡಗು ಜಿಲ್ಲೆ ಕಡೆಗಣಿಸಿದ ಹಿನ್ನೆಲೆ: ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ….

ಕೊಡಗು,ಫೆ,7,2020(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ಕೊಡಗು ಜಿಲ್ಲೆಯನ್ನ ಕಡೆಗಣಿಸಿರುವ ಹಿನ್ನೆಲೆ ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್, ಸಂಪುಟದಲ್ಲಿ  ಎರಡು ಜನಾಂಗದ 17 ಜನರಿಗೆ ಮಂತ್ರಿ ಸ್ಥಾನ ನೀಡಲಾಗಿದೆ.  ಉಳಿದವರು ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುವ ಕೆಲಸ ಆಗಬೇಕು.  ಮುಂದಿನ ದಿನದಲ್ಲಾದರೂ ಹಿರಿಯರು ಇದನ್ನ ಸರಿಪಡಿಸಲಿ. ಕೊಡಗಿಗೂ ಒಂದು ಮಂತ್ರಿ ಸ್ಥಾನ ಕೊಡಬೇಕು. ಹಿರಿಯರು ಎಲ್ಲವನ್ನು ಸರಿಪಡಿಸುತ್ತಾರೆಂಬ ನಂಬಿಕೆ ಇದೆ ಎಂದಿದ್ದಾರೆ.

ನಿನ್ನೆ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ 10 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಮೂರು ಮೂಲ ಬಿಜೆಪಿ ಶಾಸಕರು ಸಚಿವರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಚಿವಾಕಾಂಕ್ಷಿಗಳ ಹೆಚ್ಚಳ ಮತ್ತು ಅಸಮಾಧಾನ ಹಿನ್ನೆಲೆ ಈ ಮೂರು ಸಚಿವ ಸ್ಥಾನ ಭರ್ತಿಯನ್ನ ಬಿಜೆಪಿ ಹೈಕಮಾಂಡ್ ಮುಂದೂಡಿಕೆ ಮಾಡಿದೆ.

Key words: Kodagu –district- ignored – cabinet expansion-BJP MLA-appachu ranjan