ಕೊಡಗಿನಲ್ಲಿ ಇದೀಗ ಕೊರೋನಾ ಜತೆಗೆ ಎದುರಾಯ್ತು ಹಕ್ಕಿಜ್ವರದ ಭೀತಿ….

ಕೊಡಗು,ಮಾ,20,2020(www.justkannada.in):  ಕೊರೋನಾ ವೈರಸ್ ಹಾವಳಿ ಕೊಡಗು ಜಿಲ್ಲೆಗೆ ಕಾಲಿಟ್ಟಿದ್ದು ನಿನ್ನೆ ಸೌದಿಯಿಂದ ಬಂದ ಮಡಿಕೇರಿಯ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಇದೀಗ ಕೊಡಗಿನಲ್ಲಿ  ಕೊರೋನಾ ಭೀತಿ ನಡುವೆ ಹಕ್ಕಿಜ್ವರದ ಆತಂಕ ಸೃಷ್ಠಿಯಾಗಿದೆ.

ಕೊಡಗಿನ  ಮಡಿಕೇರಿ ತಾಲ್ಲೂಕಿನ ಕೊಟ್ಟಮಡಿಯಲ್ಲಿ ಕಾಗಗೆಗಳ ಅಸಹಜ ಸಾವು ಆತಂಕ ಮೂಡಿಸಿದೆ. ಕೊಟ್ಟಮಡಿಯಲ್ಲಿ  20 ಕ್ಕೂ ಹೆಚ್ವು ಮೃತ ಕಾಗಗಳು ಮೃತಪಟ್ಟಿದ್ದು  ನೆನ್ನೆ ಪತ್ತೆಯಾಗಿದೆ. ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾಡಳಿತ ತಕ್ಷಣ ಅಲರ್ಟ್ ಆಗಿದೆ.kodagu-corona-bird-flue-crows-death

ವೈದಕೀಯ ವರದಿ ಬರುವರೆಗೂ ಹಕ್ಕಿಜ್ವರದ ಆತಂಕ ಮನೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ತಮ್ಮಯ್ಯ, ನೆನ್ನೆ ಕೊಡಗಿನ ಕೊಟ್ಟಮುಡಿಯಲ್ಲಿ ಕಾಗೆಗಳು ಮೃತಪಟ್ಟಿವೆ.  ಮೃತ ಕಾಗೆಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ರಕ್ತದ ಮಾದರಿಯನ್ನು ಮೈಸೂರಿ ಲ್ಯಾಬ್ ಗೆ ರವಾನೆ ಮಾಡಲಾಗಿದೆ. ಸುಮಾರು 40 ಕಾಗೆಗಳು ಮೃತಪಟ್ಟಿವೆ. ಎರಡು ದಿನಗಳಲ್ಲಿ ವರದಿ ಕೈಸೇರಲ್ಲಿದೆ.  ಜನತೆ ಆತಂಕಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

Key words: kodagu-corona –bird flue- crows-death